ಕನ್ನಡ ಮತ್ತು ಇತರೆ ಭಾಷೆಯ ಚಿತ್ರರಂಗಲ್ಲಿ ಗುರುತಿಸಿಕೊಂಡಿರುವ ಡಾಲಿ ಧನಂಜಯ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಶುರು ಆಗಿದೆ. ಧನ್ಯತಾ ಜೊತೆ ಡಾಲಿ ಧನಂಜಯ ಅವರು ಹಸೆಮಣೆ ಏರಿದ್ದಾರೆ.
ಬಹಳ ಅದ್ದೂರಿಯಾಗಿ ಡಾಲಿ ಧನಂಜಯ ಅವರ ಮದುವೆ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿ ಆಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ವಿವಾಹ ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ.
ಡಾಲಿ ಧನಂಜಯ ಹಾಗೂ ಧನ್ಯತಾ ಅವರಿಗೆ ಮೈಸೂರು ಇಷ್ಟದ ಸ್ಥಳ. ಹಾಗಾಗಿ ಮೈಸೂರಿನಲ್ಲೇ ಮದುವೆ ಮಾಡಲಾಗಿದೆ. ದೇವಸ್ಥಾನದ ಥೀಮ್ನಲ್ಲಿ ಗ್ರ್ಯಾಂಡ್ ಆಗಿ ಡಾಲಿ ಮದುವೆಯ ಮಂಟಪ ಸಿದ್ಧವಾಗಿತ್ತು.
ಧನ್ಯತಾ ಅವರು ವೈದ್ಯರಾಗಿದ್ದಾರೆ. ಅವರದ್ದು ಅರೇಂಜ್ ಮ್ಯಾರೇಜ್. ಕುಟುಂಬದವರು, ಆಪ್ತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಈ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ಫೋಟೋಗಳು ಕಲರ್ಫುಲ್ ಆಗಿವೆ.
ತಾಳಿ ಕಟ್ಟುವ ವೇಳೆ ಧನ್ಯತಾ ಅವರು ಎಮೋಷನಲ್ ಆದರು. ಚಿತ್ರರಂಗದಲ್ಲಿ ಧನಂಜಯ ಅವರು ತುಂಬ ಬ್ಯುಸಿ ಆಗಿದ್ದಾರೆ. ಮದುವೆ ಸಲುವಾಗಿ ಅವರು ಸಿನಿಮಾದ ಕೆಲಸಗಳಿಗೆ ಕೊಂಚ ಬ್ರೇಕ್ ನೀಡಿದ್ದಾರೆ.
Daali Dhananjaya Marriage (8)