ದಾವಣಗೆರೆ: ಇಲ್ಲಿ ದೀಪಗಳದ್ದೆ ದರ್ಬಾರು! ಆದ್ರೆ ಅದು ದೀಪಾವಳಿಯಲ್ಲ: ಇಲ್ಲಿದೆ ಸ್ಪೆಷಲ್ ದೀಪೋತ್ಸವದ ದೃಶ್ಯ ವೈಭವ
TV9 Web | Updated By: ಸಾಧು ಶ್ರೀನಾಥ್
Updated on:
Dec 22, 2022 | 12:36 PM
Davanagere Deepotsava : ಇಲ್ಲಿ ದೀಪಗಳದ್ದೆ ದರ್ಬಾರು. ಆದ್ರೆ ಅದು ದೀಪಾವಳಿಯಲ್ಲ. ನಗರದ ಬಹುತೇಕರು ಬಂದು ಮನೆಗೊಂದು ದೀಪ ಹಚ್ಚುತ್ತಾರೆ. ಹೀಗೆ ದೀಪ ಹಚ್ಚಿದ್ರೆ ಕಟ್ಟಿಕೊಂಡ ಹರಿಕೆ ಪೂರೈಕೆ ಆದಂತೆ. ಇಲ್ಲಿದೆ ನೋಡಿ ಸ್ಪೆಷಲ್ ದೀಪ ಸ್ಟೋರಿ.
1 / 13
ಗಂಟೆ ಬಡಿದ ಯಾರಿಗಾದರೂ ತೊಂದರೆ ಆದರೆ ಅದು ಅವರದ್ದೇ ತಪ್ಪು ಎಂಬ ನಂಬಿಕೆಯಿದೆ. ದೇವಿಯೇ ಶಿಕ್ಷೆ ಕೊಟ್ಟಿದ್ದಾಳೆ ಎಂದು ಜನ ತಿಳಿದುಕೊಳ್ಳುತ್ತಾರೆ.
2 / 13
ಇಲ್ಲಿನ ಇನ್ನೊಂದು ವಿಶೇಷ ಅಂದ್ರೆ ಬಹುತೇಕರು ಪೊಲೀಸ್ ಠಾಣೆ, ಕೋರ್ಟ್ ಕಚೇರಿ ಅಂತಾ ಹೋಗಲ್ಲ. ಜನರ ಮಧ್ಯೆ ಜಗಳಗಳು ಬಂದ್ರೆ, ವ್ಯವಹಾರದಲ್ಲಿ ತಿಕ್ಕಾಟ ಶುರುವಾದ್ರೆ ದೇವಸ್ಥಾನದ ಗಂಟೆ ಬಡಿಯುತ್ತಾರೆ.
3 / 13
ಕೆಲವರಾದ್ರೆ ಮುಂದೆ ಆಗಬೇಕಾದ್ದು ಏನಾದ್ರು ಇದ್ದರೆ ಆ ಬೇಡಿಕೆ ಇಟ್ಟುಕೊಂಡು ದೀಪ ಹಚ್ಚುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ದೀಪದ ಹಬ್ಬದ ಸಂಭ್ರಮವನ್ನ ಕಣ್ಣಾರೇ ನೋಡುವುದೇ ಒಂದು ರೀತಿಯಲ್ಲಿ ವಿಶೇಷ. (ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)
4 / 13
ಇದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಲ್ಲಿ ಹೇಳುತ್ತಿರುವುದು ದಾವಣಗೆರೆ ನಗರ ದೇವತೆ ದುರ್ಗಾಂಭಿಕಾ ದೇವಿಯ ದೇವಸ್ಥಾನದಲ್ಲಿ ನಡೆದ ದೀಪೋತ್ಸವದ ಸಂಭ್ರಮ.
5 / 13
ದೇವಸ್ಥಾನದ ಗಂಟೆ ಫಲಿಂತಾಶ ಒಂದು ತಿಂಗಳಲ್ಲಿ ಬರುತ್ತದೆಯಂತೆ. ಗಂಟೆ ಬಡಿದ ಯಾರಿಗಾದರೂ ತೊಂದರೆ ಆದರೆ ಅದು ಅವರದ್ದೇ ತಪ್ಪು ಎಂಬ ನಂಬಿಕೆಯಿದೆ. ದೇವಿಯೇ ಶಿಕ್ಷೆ ಕೊಟ್ಟಿದ್ದಾಳೆ ಎಂದು ಜನ ತಿಳಿದುಕೊಳ್ಳುತ್ತಾರೆ. ಆದ್ರೆ ದೀಪ ಹಚ್ಚುವುದು ಅಂದುಕೊಂಡಿದ್ದು ಆದ ಬಳಿಕ ದೇವಿಗೆ ಹರಕೆ ಒಪ್ಪಿಸುವ ಸಂಪ್ರದಾಯದ ಒಂದು ಭಾಗ.
6 / 13
ದುರ್ಗಾಂಭಿಕಾ ದೇವಿಯ ದೇವಸ್ಥಾನದ ಸುತ್ತಲು ಇರುವ ಹಲವಾರು ದೇವಸ್ಥಾನಗಳಿಗೆ ಕಾರ್ತೀಕದ ದೀಪಗಳ ಹೋಗಿ ಬರುತ್ತವೆ. ಇದಾದ ಬಳಿಕ ದುರ್ಗಾಂಭಿಕೆಗೆ ದೀಪದ ಆರತಿ ನಡೆಯುತ್ತದೆ.
7 / 13
ಹೀಗೆ ದೀಪ ಹಚ್ಚಲು ವಿಶೇಷ ಕಾರಣವಿದೆ. ಇಲ್ಲಿನ ಇನ್ನೊಂದು ವಿಶೇಷ ಅಂದ್ರೆ ಬಹುತೇಕರು ಪೊಲೀಸ್ ಠಾಣೆ, ಕೋರ್ಟ್ ಕಚೇರಿ ಅಂತಾ ಹೋಗಲ್ಲ. ಜನರ ಮಧ್ಯೆ ಜಗಳಗಳು ಬಂದ್ರೆ, ವ್ಯವಹಾರದಲ್ಲಿ ತಿಕ್ಕಾಟ ಶುರುವಾದ್ರೆ ದೇವಸ್ಥಾನದ ಗಂಟೆ ಬಡಿಯುತ್ತಾರೆ.
8 / 13
ಸ್ಥಳೀಯ ದಾವಣಗೆರೆ ಭಾಷೆಯಲ್ಲಿ ಇದಕ್ಕೆ ಕಡೆಕಾರ್ತೀಕ ಎನ್ನುತ್ತಾರೆ. ಇಂತಹ ಸಂಭ್ರಮಕ್ಕೆ ಸಾಕ್ಷಿ ಆಗಿದ್ದು ಸಾವಿರಾರು ಜನರು. ದುರ್ಗಾಂಭಿಕಾ ದೇವಿಯ ದೇವಸ್ಥಾನದ ಸುತ್ತಲು ಇರುವ ಹಲವಾರು ದೇವಸ್ಥಾನಗಳಿಗೆ ಕಾರ್ತೀಕದ ದೀಪಗಳ ಹೋಗಿ ಬರುತ್ತವೆ. ಇದಾದ ಬಳಿಕ ದುರ್ಗಾಂಭಿಕೆಗೆ ದೀಪದ ಆರುತಿ ನಡೆಯುತ್ತದೆ. ಸಾವಿರಾರು ದೀಪಗಳನ್ನ ಹಚ್ಚಲು ಇದಕ್ಕಾಗಿಯೇ ವಿಶೇಷ ಸ್ಟಾಂಡ್ ಗಳನ್ನ ಮಾಡಲಾಗಿರುತ್ತದೆ.
9 / 13
ದುರ್ಗಾಂಭಿಕಾ ದೇವಿಯ ದೇವಸ್ಥಾನದ ಸುತ್ತಲು ಇರುವ ಹಲವಾರು ದೇವಸ್ಥಾನಗಳಿಗೆ ಕಾರ್ತೀಕದ ದೀಪಗಳ ಹೋಗಿ ಬರುತ್ತವೆ. ಇದಾದ ಬಳಿಕ ದುರ್ಗಾಂಭಿಕೆಗೆ ದೀಪದ ಆರತಿ ನಡೆಯುತ್ತದೆ. ಸಾವಿರಾರು ದೀಪಗಳನ್ನ ಹಚ್ಚಲು ಇದಕ್ಕಾಗಿಯೇ ವಿಶೇಷ ಸ್ಟಾಂಡ್ ಗಳನ್ನ ಮಾಡಲಾಗಿರುತ್ತದೆ.
10 / 13
ಪ್ರತಿ ವರ್ಷ ಚಳಿಗಾಲದಲ್ಲಿ ಬರುವ ದೀಪದ ಹಬ್ಬ. ಅಂದ್ರೆ ಕಡೇ ಕಾರ್ತೀಕಕ್ಕೆ ಸಾವಿರಾರು ಜನ ಸೇರುತ್ತಾರೆ. ಕೇವರು ಅಂದುಕೊಂಡಿದ್ದು ಆದ ಬಳಿಕ ದೇವಿಗೆ ದೀಪ ಹಚ್ಚಿ ಹರಿಕೆ ಮುಟ್ಟಿಸುತ್ತಾರೆ.
11 / 13
ಎಲ್ಲಿ ನೋಡಿದರಲ್ಲಿ ಚೆಂಬೆಳಕು. ಬೆಳಕು ಅಂದ್ರೆ ಜ್ಞಾನದ ಸಂಕೇತ. ಸಂಭ್ರಮದ ಸೂಚಕ. ಪ್ರತಿಯೊಬ್ಬರೂ ಬಟ್ಟೆಯಲ್ಲಿ ಸುತ್ತಿದ್ದ ಹತ್ತಿಕಾಳಿನ, ವಿಶೇಷವಾಗಿ ಎಣ್ಣೆ ಅಂಶ ಇರುವ ದೀಪ ಹಚ್ಚುವುದು ಇಲ್ಲಿನ ವಾಡಿಕೆ.
12 / 13
ಅದು ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಉತ್ಸವ. ಇದಕ್ಕಾಗಿ ತಿಂಗಳಿಂದ ಸಿದ್ಧತೆಗಳು ಶುರುವಾಗುತ್ತದೆ. ಇಲ್ಲಿ ದೀಪಗಳದ್ದೆ ದರ್ಬಾರು. ಆದ್ರೆ ಅದು ದೀಪಾವಳಿಯಲ್ಲ. ನಗರದ ಬಹುತೇಕರು ಬಂದು ಮನೆಗೊಂದು ದೀಪ ಹಚ್ಚುತ್ತಾರೆ. ಹೀಗೆ ದೀಪ ಹಚ್ಚಿದ್ರೆ ಕಟ್ಟಿಕೊಂಡ ಹರಿಕೆ ಪೂರೈಕೆ ಆದಂತೆ. ಇಲ್ಲಿದೆ ನೋಡಿ ಸ್ಪೆಷಲ್ ದೀಪ ಸ್ಟೋರಿ.
13 / 13
ಎಲ್ಲಿ ನೋಡಿದರಲ್ಲಿ ಚೆಂಬೆಳಕು. ಬೆಳಕು ಅಂದ್ರೆ ಜ್ಞಾನದ ಸಂಕೇತ. ಸಂಭ್ರಮದ ಸೂಚಕ. ಪ್ರತಿಯೊಬ್ಬರೂ ಬಟ್ಟೆಯಲ್ಲಿ ಸುತ್ತಿದ್ದ ಹತ್ತಿಕಾಳಿನ, ವಿಶೇಷವಾಗಿ ಎಣ್ಣೆ ಅಂಶ ಇರುವ ದೀಪ ಹಚ್ಚುವುದು ಇಲ್ಲಿನ ವಾಡಿಕೆ. ಇದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಲ್ಲಿ ಹೇಳುತ್ತಿರುವುದು ದಾವಣಗೆರೆ ನಗರ ದೇವತೆ ದುರ್ಗಾಂಭಿಕಾ ದೇವಿಯ ದೇವಸ್ಥಾನದಲ್ಲಿ ನಡೆದ ದೀಪೋತ್ಸವದ ಸಂಭ್ರಮ.