ಇನ್ನು ಇಂತಹ ಪವಾಡಗಳನ್ನ ಮಾಡುವವರನ್ನ ಗೊರವಪ್ಪಗಳು ಎಂದು ಕರೆಯುತ್ತಾರೆ. ಶಿವಮೊಗ್ಗ ಜಿಲ್ಲೆಯ ಹೊಳೆಹೆನ್ನೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ವಾಸವಾಗಿರುತ್ತಾರೆ. ಇವರಿಗೆ ಮೈಲಾರಲಿಂಗನ ಆರ್ಶೀವಾದ ಇದೆ ಎಂಬ ಪ್ರತೀತಿ. ಹೀಗಾಗಿ ಅವರು ಮೈಲಾರನಿಗೆ ವರ್ಷಕ್ಕೊಮ್ಮೆ ಈ ರೀತಿ ಭಕ್ತಿ ಅರ್ಪಿಸಿದರೆ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ. ಜೊತೆಗೆ ದೇಶ ಸುಭಿಕ್ಷೆಯಿಂದ ಇರುತ್ತದೆ ಎಂಬುದು ಇವರ ನಂಬಿಕೆ.