Death Spots in the World: ಈ ಸ್ಥಳಗಳಿಗೆ ಭೇಟಿ ನೀಡುವುದು ಒಂದೇ, ಸಾವಿನ ಕದ ತಟ್ಟುವುದು ಒಂದೇ!
TV9 Web | Updated By: ಗಂಗಾಧರ ಬ. ಸಾಬೋಜಿ
Updated on:
Sep 19, 2022 | 6:47 PM
ಜಗತ್ತಿನಲ್ಲಿ ಅದ್ಭುತವಾದ ಪ್ರವಾಸಿ ತಾಣಗಳಿವೆ. ಹಾಗೆಯೇ ಅತ್ಯಂತ ಅಪಾಯಕಾರಿ ತಾಣಗಳೂ ಇವೆ. ಇವು ಅಪಾಯಕಾರಿ ಸ್ಥಳಗಳೆಂದು ತಿಳಿದಿದ್ದರೂ ಪ್ರವಾಸಿಗರು ಇವುಗಳನ್ನು ನೋಡಲು ಹಾತೊರೆಯುತ್ತಿದ್ದಾರೆ.
1 / 5
ಜಗತ್ತಿನಲ್ಲಿ ಅದ್ಭುತವಾದ ಪ್ರವಾಸಿ ತಾಣಗಳಿವೆ. ಹಾಗೆಯೇ ಅತ್ಯಂತ ಅಪಾಯಕಾರಿ ತಾಣಗಳೂ ಇವೆ. ಇವು ಅಪಾಯಕಾರಿ ಸ್ಥಳಗಳೆಂದು ತಿಳಿದಿದ್ದರೂ ಪ್ರವಾಸಿಗರು ಇವುಗಳನ್ನು ನೋಡಲು ಹಾತೊರೆಯುತ್ತಿದ್ದಾರೆ. ಅಂತಹ ಪ್ರವಾಸಿ ತಾಣಗಳು ಯಾವವು ಮತ್ತು ಎಲ್ಲಿಯೇ ಎಂದು ತಿಳಿಯೋಣ.
2 / 5
ಕಮ್ಚಟ್ಕಾ: ರಷ್ಯಾದಲ್ಲಿರುವ ಕಮ್ಚಟ್ಕಾವನ್ನು ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಇದರಿಂದಾಗಿ ಪ್ರಾಣಿಗಳು ಮತ್ತು ಸಸ್ಯಗಳು ಬೇಗನೆ ಸಾಯುತ್ತವೆ. ಈ ಸ್ಥಳವನ್ನು ಪ್ರವೇಶಿಸಿದರೆ, ಜ್ವರ, ವಾಂತಿ ಮತ್ತು ವಾಕರಿಕೆ ಪ್ರಾರಂಭವಾಗುತ್ತದೆ.
3 / 5
ಮೌಂಟ್ ವಾಷಿಂಗ್ಟನ್: ಅಮೆರಿಕದ ಮೌಂಟ್ ವಾಷಿಂಗ್ಟನ್ ವಿಶ್ವದ ಅತ್ಯಂತ ಶೀತ ಸ್ಥಳಗಳಲ್ಲಿ ಒಂದು. ಇಲ್ಲಿ 300 ಕಿ.ಮೀ ವೇಗದಲ್ಲಿ ತಣ್ಣನೆಯ ಗಾಳಿ ಗಂಟೆಗೆ ಬೀಸುತ್ತದೆ. ತಾಪಮಾನ -40 ಡಿಗ್ರಿ ಇರುತ್ತದೆ. ಅಂತಹ ತಣ್ಣನೆಯ ಸ್ಥಳದಲ್ಲಿ ಯಾರಾದರೂ ಸ್ವಲ್ಪ ಹೊತ್ತು ನಿಂತರೆ, ಅವರು ಸಾಯುವುದು ಖಚಿತ ಆದ್ದರಿಂದ, ಮೌಂಟ್ ವಾಷಿಂಗ್ಟನ್ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳ ಎಂದು ಹೇಳಲಾಗುತ್ತದೆ.
4 / 5
ಬಾಲಿ: ಇಂಡೋನೇಷ್ಯಾದ ಬಾಲಿ ಇದು ಕೂಡ ಅಪಾಯಕಾರಿ ಅಥವಾ ಡೆತ್ ಸ್ಪಾಟ್ ಎಂದು ಪರಿಗಣಿಸಲಾಗಿದೆ. ಅದು ಸಿನಾಬಂಗ್ ಜ್ವಾಲಾಮುಖಿ. ಈ ಜ್ವಾಲಾಮುಖಿ 2016ರಲ್ಲಿ ಕೊನೆಯದಾಗಿ ಸ್ಫೋಟಿಸಿತು.
5 / 5
ಸ್ನೇಕ್ ಐಲ್ಯಾಂಡ್: ಬ್ರೆಜಿಲ್‌ನ ಸ್ನೇಕ್ ಐಲ್ಯಾಂಡ್ ಎಂದು ಕರೆಯಲ್ಪಡುವ ಲಾ ಡ ಕ್ವೆಮಡಾ ಗ್ರಾಂಡೆ ಸೈಟ್ ಕೂಡ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಇಲ್ಲಿ ಅನೇಕ ವಿಷಕಾರಿ ಹಾವುಗಳಿವೆ. ಅಲ್ಲಿಗೆ ಹೋಗುವುದೆಂದರೆ ಸಾವಿನ ಬಾಯಿಗೆ ಆಹಾರವಾಗುವುದು ಒಂದೆ. ಬ್ರೆಜಿಲ್ ಸರ್ಕಾರ ಇದನ್ನು ಪ್ರವಾಸಿ ತಾಣದಿಂದ ನಿಷೇಧಿಸಿದೆ.
Published On - 6:38 pm, Mon, 19 September 22