Rubel Hossain: ಅತ್ಯಾಚಾರ ಆರೋಪ ಹೊತ್ತಿದ್ದ ಬಾಂಗ್ಲಾ ಬೌಲರ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ..!
Rubel Hossain: 2015ರ ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶದ ನಟಿ ನಜ್ನೀನ್ ಅಖ್ತರ್ ಈ ಆಟಗಾರನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ಇದಾದ ನಂತರ ಹುಸೇನ್ ಮೂರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು.
Updated on:Sep 19, 2022 | 4:55 PM

ಬಾಂಗ್ಲಾದೇಶದ ವೇಗದ ಬೌಲರ್ ರುಬೆಲ್ ಹೊಸೈನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹುಸೇನ್ ಮಂಗಳವಾರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹುಸೇನ್ ಹೇಳಿಕೊಂಡಿದ್ದಾರೆ.

ರುಬೆಲ್ ಹೊಸೈನ್ ಬಾಂಗ್ಲಾದೇಶ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 36 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶದ ವೇಗದ ಬೌಲರ್ ಆಗಿರುವ ರುಬೈಲ್, ಗಂಟೆಗೆ 149.5 ಕಿ.ಮೀ. ವೇಗದಲ್ಲಿ ಚೆಂಡನ್ನು ಎಸೆಯುವ ಸಾಮಥ್ಯ್ರ ಹೊಂದಿದ್ದಾರೆ.

ರುಬೈಲ್ ಹುಸೇನ್ ಅವರ ವೃತ್ತಿಜೀವನವು ಸಾಕಷ್ಟು ವಿವಾದಗಳಿಂದು ಕೂಡಿದ್ದು, 2015ರ ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶದ ನಟಿ ನಜ್ನೀನ್ ಅಖ್ತರ್ ಈ ಆಟಗಾರನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ಇದಾದ ನಂತರ ಹುಸೇನ್ ಮೂರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು.

ಅತ್ಯಾಚಾರ ಆರೋಪವಿದ್ದರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ರುಬೈಲ್ ಹೊಸೈನ್, 2015 ರ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡದಲ್ಲಿ ಆಯ್ಕೆಯಾಗಿದ್ದರು. ಈ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯ ದಾಖಲಿಸಿತ್ತು, ಈ ಪಂದ್ಯದಲ್ಲಿ ಹುಸೇನ್ ಹೀರೋ ಆಗಿದ್ದರು. ಹುಸೇನ್ ಅವರ ಈ ಪ್ರದರ್ಶನದ ನಂತರ, ನಟಿ ನಜ್ನೀನ್ ಅಖ್ತರ್ ಅವರ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಂಡಿದ್ದರು.

ಸೆಪ್ಟೆಂಬರ್ 14 ರಂದು ಬಾಂಗ್ಲಾದೇಶ T20 ವಿಶ್ವಕಪ್‌ಗೆ ತನ್ನ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ರುಬೈಲ್ ಹೊಸೈನ್ ಸ್ಥಾನ ಪಡೆದಿಲ್ಲ. ಮಹಮ್ಮದುಲ್ಲಾ ಅವರಂತಹ ಅನುಭವಿ ಆಟಗಾರನಿಗೂ ತಂಡದಲ್ಲಿ ಅವಕಾಶ ಸಿಕ್ಕಿಲ್ಲ ಎಂಬುದು ಇಲ್ಲಿ ವಿಶೇಷ.
Published On - 4:54 pm, Mon, 19 September 22




