AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rubel Hossain: ಅತ್ಯಾಚಾರ ಆರೋಪ ಹೊತ್ತಿದ್ದ ಬಾಂಗ್ಲಾ ಬೌಲರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ..!

Rubel Hossain: 2015ರ ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶದ ನಟಿ ನಜ್ನೀನ್ ಅಖ್ತರ್ ಈ ಆಟಗಾರನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ಇದಾದ ನಂತರ ಹುಸೇನ್ ಮೂರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು.

TV9 Web
| Edited By: |

Updated on:Sep 19, 2022 | 4:55 PM

Share
ಬಾಂಗ್ಲಾದೇಶದ ವೇಗದ ಬೌಲರ್ ರುಬೆಲ್ ಹೊಸೈನ್ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಹುಸೇನ್ ಮಂಗಳವಾರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹುಸೇನ್ ಹೇಳಿಕೊಂಡಿದ್ದಾರೆ.

1 / 5
ರುಬೆಲ್ ಹೊಸೈನ್ ಬಾಂಗ್ಲಾದೇಶ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 36 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶದ ವೇಗದ ಬೌಲರ್ ಆಗಿರುವ ರುಬೈಲ್, ಗಂಟೆಗೆ 149.5 ಕಿ.ಮೀ. ವೇಗದಲ್ಲಿ ಚೆಂಡನ್ನು ಎಸೆಯುವ ಸಾಮಥ್ಯ್ರ ಹೊಂದಿದ್ದಾರೆ.

2 / 5
ರುಬೈಲ್ ಹುಸೇನ್ ಅವರ ವೃತ್ತಿಜೀವನವು ಸಾಕಷ್ಟು ವಿವಾದಗಳಿಂದು ಕೂಡಿದ್ದು, 2015ರ ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶದ ನಟಿ ನಜ್ನೀನ್ ಅಖ್ತರ್ ಈ ಆಟಗಾರನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ಇದಾದ ನಂತರ ಹುಸೇನ್ ಮೂರು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು.

3 / 5
ಅತ್ಯಾಚಾರ ಆರೋಪವಿದ್ದರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ರುಬೈಲ್ ಹೊಸೈನ್, 2015 ರ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡದಲ್ಲಿ ಆಯ್ಕೆಯಾಗಿದ್ದರು. ಈ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯ ದಾಖಲಿಸಿತ್ತು, ಈ ಪಂದ್ಯದಲ್ಲಿ ಹುಸೇನ್ ಹೀರೋ ಆಗಿದ್ದರು. ಹುಸೇನ್ ಅವರ ಈ ಪ್ರದರ್ಶನದ ನಂತರ, ನಟಿ ನಜ್ನೀನ್ ಅಖ್ತರ್ ಅವರ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಂಡಿದ್ದರು.

4 / 5
ಸೆಪ್ಟೆಂಬರ್ 14 ರಂದು ಬಾಂಗ್ಲಾದೇಶ T20 ವಿಶ್ವಕಪ್‌ಗೆ ತನ್ನ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ರುಬೈಲ್ ಹೊಸೈನ್ ಸ್ಥಾನ ಪಡೆದಿಲ್ಲ. ಮಹಮ್ಮದುಲ್ಲಾ ಅವರಂತಹ ಅನುಭವಿ ಆಟಗಾರನಿಗೂ ತಂಡದಲ್ಲಿ ಅವಕಾಶ ಸಿಕ್ಕಿಲ್ಲ ಎಂಬುದು ಇಲ್ಲಿ ವಿಶೇಷ.

5 / 5

Published On - 4:54 pm, Mon, 19 September 22