- Kannada News Photo gallery Cricket photos jhulan goswami record in first odi match against England of her last odi series
IND vs ENG: ವಿದಾಯದ ಸರಣಿಯ ಮೊದಲ ಪಂದ್ಯದಲ್ಲೇ ಎರಡೆರಡು ವಿಶ್ವ ದಾಖಲೆ ಮುರಿದ ಜೂಲನ್ ಗೋಸ್ವಾಮಿ..!
Jhulan Goswami: ಮಿಥಾಲಿ ರಾಜ್ ಇಲ್ಲದೆ ಜೂಲನ್ ಏಕದಿನ ಪಂದ್ಯವನ್ನಾಡುತ್ತಿರುವುದು ಇದೇ ಮೊದಲು. ಇದುವರೆಗೆ ಅವರು ಮಿಥಾಲಿಯೊಂದಿಗೆ ಪ್ರತಿ ಏಕದಿನ ಪಂದ್ಯವನ್ನು ಆಡಿದ್ದಾರೆ.
Updated on: Sep 19, 2022 | 3:09 PM

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಜೂಲನ್ ಗೋಸ್ವಾಮಿ ಅವರ ವೃತ್ತಿಜೀವನದ ಕೊನೆಯ ಸರಣಿಯಾಗಿದ್ದು, ಈ ಸರಣಿಯ ನಂತರ ಅವರು ವೃತ್ತಿ ಜೀವನದಿಂದ ನಿವೃತ್ತಿಯಾಗಲಿದ್ದಾರೆ. ತನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ದೇಶದ ಪರವಾಗಿ ಹಲವು ದೊಡ್ಡ ದಾಖಲೆಗಳನ್ನು ಸೃಷ್ಟಿಸಿರುವ ಜೂಲನ್, ಈ ಸರಣಿಯಲ್ಲೂ ದಾಖಲೆಗಳನ್ನು ಮುರಿಯುವ ಸರದಿಯನ್ನು ಮುಂದುವರೆಸಿದ್ದಾರೆ.

ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಜೂಲನ್ ಈ ವರ್ಷ ಇದುವರೆಗೆ ಒಂಬತ್ತು ಏಕದಿನ ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ.

ಈ ಮೂಲಕ ಜೂಲನ್ ತನ್ನ ವೃತ್ತಿಜೀವನದ ಕೊನೆಯ ODI ನಲ್ಲಿ ಕ್ಯಾಥರೀನ್ ಫಿಟ್ಜ್‌ಪ್ಯಾಟ್ರಿಕ್ ಅವರ ದಾಖಲೆಯನ್ನು ಮುರಿದರು. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ಆಟಗಾರ್ತಿ ಕ್ಯಾಥರೀನ್ ಹೆಸರಿನಲ್ಲಿತ್ತು. ಈಗ ಜೂಲನ್ 24 ವಿಕೆಟ್ ಪಡೆಯುವ ಮೂಲಕ 23 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದ ಕ್ಯಾಥರೀನ್ ದಾಖಲೆಯನ್ನು ನೆಲಸಮ ಮಾಡಿದ್ದಾರೆ.

ಅಲ್ಲದೆ ಈ ಸರಣಿಯಲ್ಲಿ ಜೂಲನ್ ಗೋಸ್ವಾಮಿ ODI ಪಂದ್ಯವನ್ನಾಡಿದ ಅತ್ಯಂತ ಹಿರಿಯ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿದಾಗ ಅವರಿಗೆ 39 ವರ್ಷ 297 ದಿನ ವಯಸ್ಸಾಗಿತ್ತು. ಇದಕ್ಕೂ ಮುನ್ನ ಮಿಥಾಲಿ ರಾಜ್ ತಮ್ಮ 39 ವರ್ಷ 114 ದಿನಗಳಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಈ ಪಟ್ಟಿಯಲ್ಲಿ ಡಯಾನಾ ಎಡುಲ್ಜಿ ಮೂರನೇ ಸ್ಥಾನದಲ್ಲಿದ್ದು, ಅವರು 1993 ರಲ್ಲಿ 37 ವರ್ಷ ಮತ್ತು 184 ದಿನಗಳ ವಯಸ್ಸಿನಲ್ಲಿ ODI ಪಂದ್ಯವನ್ನು ಆಡಿದರು.

ಮಿಥಾಲಿ ರಾಜ್ ಇಲ್ಲದೆ ಜೂಲನ್ ಏಕದಿನ ಪಂದ್ಯವನ್ನಾಡುತ್ತಿರುವುದು ಇದೇ ಮೊದಲು. ಇದುವರೆಗೆ ಅವರು ಮಿಥಾಲಿಯೊಂದಿಗೆ ಪ್ರತಿ ಏಕದಿನ ಪಂದ್ಯವನ್ನು ಆಡಿದ್ದಾರೆ. 2002 ರಿಂದ 2022 ರವರೆಗೆ, ಜೂಲನ್ 201 ODI ಪಂದ್ಯಗಳನ್ನು ಆಡಿದ್ದಾರೆ.




