Kannada News Photo gallery Delhi Rain: Delhi Receives Heavy Rain, triggers water logging across Delhi-NCR,Flight Ops Hit, Trees Uprooted
ದೆಹಲಿಯಲ್ಲಿ ಧಾರಾಕಾರ ಮಳೆ, ಕೆರೆಯಂತಾದ ರಸ್ತೆಗಳು, ಜನರ ಪರದಾಟ
Delhi Rain: ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿಯೂ ಗಾಳಿ ವೇಗವಾಗಿ ಬೀಸುತ್ತಿದೆ. ಗುಡುಗು ಸಹಿತ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಕೇವಲ ಎರಡು ಗಂಟೆಗಳ ಮಳೆಗೆ ಇಡೀ ದೆಹಲಿಯೇ ನಡುಗಿದೆ. ಎಲ್ಲಿ ನೋಡಿದರೂ ನೀರು, ಕೆರೆಯಂತಾದ ರಸ್ತೆಗಳು, ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿತ್ತು. ದೆಹಲಿ-ಎನ್‌ಸಿಆರ್‌ನಲ್ಲಿ ಮಳೆಯು ಅನಾಹುತವನ್ನು ಸೃಷ್ಟಿಸಿದೆ. ರಾತ್ರಿಯ ಮಳೆಯು ದೆಹಲಿಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ದೆಹಲಿಯಾದ್ಯಂತ ಭಾರಿ ಮಳೆಗೆ ರಸ್ತೆಗಳು ತುಂಬಿ ಹರಿಯುತ್ತಿದ್ದು, ಜನರು ಓಡಾಡುವುದೇ ಕಷ್ಟವಾಗಿದೆ. ದೆಹಲಿ-ಎನ್‌ಸಿಆರ್‌ನಿಂದ ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದವರೆಗೆ, ಮಧ್ಯರಾತ್ರಿಯಿಂದ ಬೀಸಿದ ಬಿರುಗಾಳಿ ಮತ್ತು ಮಳೆಯು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ.
1 / 6
ದೆಹಲಿ, ನೋಯ್ಡಾದಿಂದ ಗಾಜಿಯಾಬಾದ್ ವರೆಗೆ ಬಲವಾದ ಗಾಳಿ ಬೀಸಿತು. ಭಾನುವಾರ ಬೆಳಿಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ ಭಾರಿ ಮಳೆಯಾಯಿತು. ಹವಾಮಾನ ಇಲಾಖೆಯ ಪ್ರಕಾರ, ಗಾಳಿಯು ಗಂಟೆಗೆ ಸುಮಾರು 60 ಕಿ.ಮೀ. ವೇಗದಲ್ಲಿ ಬೀಸಿತು. ದು ಹವಾಮಾನಕ್ಕೆ ತಂಪನ್ನು ತಂದಿತು ಆದರೆ ಜನರಿಗೆ ಸಮಸ್ಯೆಗಳನ್ನು ಹೆಚ್ಚಿಸಿತು.
2 / 6
ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ರಾತ್ರಿ ದೆಹಲಿ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳು ಮತ್ತು ಲಡಾಖ್‌ನಲ್ಲಿಯೂ ಮಳೆಯಾಗಿದೆ.. ಭಾನುವಾರ ತಮಿಳುನಾಡಿನ ಕನ್ಯಾಕುಮಾರಿ, ತಿರುನಲ್ವೇಲಿ, ತೆಂಕಸಿ, ಥೇಣಿ, ತಿರುಪ್ಪೂರು, ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
3 / 6
ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿಯೂ ಹವಾಮಾನ ಆಹ್ಲಾದಕರವಾಗಿರುತ್ತದೆ. ಕೇರಳಕ್ಕೆ ಮುಂಗಾರು ಆಗಮಿಸಿದೆ.ದೆಹಲಿಯಲ್ಲಿ ಭಾರಿ ಮಳೆಯಿಂದಾಗಿ, ಮೋತಿ ಬಾಗ್, ಮಿಂಟೋ ರಸ್ತೆ, ದೆಹಲಿ ಕಂಟೋನ್ಮೆಂಟ್ ಮತ್ತು ದೀನ್ ದಯಾಳ್ ಉಪಾಧ್ಯಾಯ ಮಾರ್ಗ ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವು ರಸ್ತೆಗಳು ಜಲಾವೃತವಾಗಿವೆ.
4 / 6
ಅನೇಕ ಪ್ರದೇಶಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ವಾಹನಗಳು ತೆವಳುತ್ತಾ ಸಾಗುತ್ತಿವೆ. ಜನರು ಓಡಾಡುವುದೇ ಕಷ್ಟವಾಗಿದೆ.ದೆಹಲಿಯಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ಅಡ್ಡಿ ಉಂಟಾಗಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ ಮತ್ತು ಅನೇಕ ಪ್ರದೇಶಗಳಲ್ಲಿ ನೀರು ನುಗ್ಗಿದೆ.
5 / 6
ದೆಹಲಿಯ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಈಗ ವಾಹನಗಳು ಇಲ್ಲಿ ಮತ್ತು ಅಲ್ಲಿ ತೆವಳುತ್ತಿವೆ. ದೆಹಲಿ ವಿಮಾನ ನಿಲ್ದಾಣದ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ಶನಿವಾರ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಳೆಯಾಗಿತ್ತು.