ಧರ್ಮೇಂದ್ರ ನಿಧನದ ನೋವು: ಭಾವುಕವಾಗಿ ಫೋಟೋ ಹಂಚಿಕೊಂಡ ಹೇಮಾ ಮಾಲಿನಿ

Updated on: Nov 27, 2025 | 8:22 PM

89ನೇ ವಯಸ್ಸಿಗೆ ನಟ ಧರ್ಮೇಂದ್ರ ಅವರು ನಿಧನರಾದರು. ಅವರ ನೆನಪಿನಲ್ಲಿ ಪತ್ನಿ ಹೇಮಾ ಮಾಲಿನಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಧರ್ಮೇಂದ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಹಾಗೆ ಆಗಲಿಲ್ಲ.

1 / 5
ಬಾಲಿವುಡ್​ನ ಖ್ಯಾತ ಕಲಾವಿದರಾದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರು ಮದುವೆ ಆಗಿದ್ದು 1980ರಲ್ಲಿ. ಇಷ್ಟು ವರ್ಷಗಳ ದಾಂಪತ್ಯವನ್ನು ಹೇಮಾ ಮಾಲಿನಿ ಈಗ ಮೆಲುಕು ಹಾಕಿದ್ದಾರೆ. ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಬಾಲಿವುಡ್​ನ ಖ್ಯಾತ ಕಲಾವಿದರಾದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರು ಮದುವೆ ಆಗಿದ್ದು 1980ರಲ್ಲಿ. ಇಷ್ಟು ವರ್ಷಗಳ ದಾಂಪತ್ಯವನ್ನು ಹೇಮಾ ಮಾಲಿನಿ ಈಗ ಮೆಲುಕು ಹಾಕಿದ್ದಾರೆ. ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

2 / 5

‘ಉತ್ತಮ ಪತಿ, ಸ್ನೇಹಿತ, ಮಾರ್ಗದರ್ಶಿ, ತತ್ವಜ್ಞಾನಿ, ಕವಿ.. ಹೀಗೆ ನನ್ನ ಪಾಲಿಗೆ ಧರ್ಮೇಂದ್ರ ಅವರು ಎಲ್ಲವೂ ಆಗಿದ್ದರು’ ಎಂದು ಹೇಮಾ ಮಾಲಿನಿ ಅವರು ಹೇಳಿದ್ದಾರೆ. ಫೋಟೋಗಳ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ.

3 / 5

‘ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಜೊತೆಯಾಗಿ ನಿಂತರು. ಸ್ನೇಹಭಾವದಿಂದ ನಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಅವರು ಆಪ್ತರಾಗಿದ್ದರು’ ಎನ್ನುವ ಮೂಲಕ ಧರ್ಮೇಂದ್​ರ ಅವರ ವ್ಯಕ್ತಿತ್ವವನ್ನು ಹೇಮಾ ಮಾಲಿನಿ ಅವರು ಹೊಗಳಿದ್ದಾರೆ.

4 / 5

ಚಿತ್ರರಂಗದಲ್ಲಿ ಧರ್ಮೇಂದ್ರ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ಅಪಾರ ಜನಪ್ರಿಯತೆ ಅವರಿಗೆ ಇತ್ತು. ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆ ಎಲ್ಲ ಕ್ಷಣಗಳನ್ನು ಹೇಮಾ ಮಾಲಿನಿ ಅವರು ಈಗ ನೆನಪಿಸಿಕೊಂಡಿದ್ದಾರೆ.

5 / 5

‘ಧರ್ಮೇಂದ್ರ ಅವರ ಅಗಲಿಕೆಯಿಂದ ನನಗೆ ಆದ ನಷ್ಟವನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ಹೇಮಾ ಮಾಲಿನಿ ಅವರು ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಧರ್ಮೇಂದ್ರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Loading...
Unable to load recommendations.
Follow Us