
ಬಾಲಿವುಡ್ ಬೆಡಗಿ ದಿಶಾ ಪಟಾನಿ ಮತ್ತೊಂದು ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ತಮ್ಮ ಕೆಲ ಹಾಟ್ ಫೋಟೊಗಳನ್ನು ದಿಶಾ ಪಟಾನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕೆಲ್ವಿನ್ ಕ್ಲೇನ್ ಬ್ರ್ಯಾಂಡ್ನ ರಾಯಭಾರಿಯಾಗಿರುವ ದಿಶಾ ಇದೇ ಬ್ರ್ಯಾಂಡ್ಗಾಗಿ ಫೋಟೊಶೂಟ್ ಮಾಡಿಸಿದ್ದಾರೆ.

ದಿಶಾ ಪಟಾನಿ ನಟನೆಗೆ ಕಾಲಿಟ್ಟಿದ್ದು ದಕ್ಷಿಣ ಚಿತ್ರರಂಗದಿಂದ ಆದರೂ ಮಿಂಚುತ್ತಿರುವುದು ಬಾಲಿವುಡ್ನಲ್ಲಿ.

ದಿಶಾ ಪಟಾನಿ ಲೋಫರ್ ಹೆಸರಿನ ತೆಲುಗು ಸಿನಿಮಾದ ಮೂಲಕ ನಟನೆ ಆರಂಭಿಸಿದರು.

ಹಲವು ವರ್ಷಗಳ ಬಳಿಕ ಮತ್ತೆ ದಕ್ಷಿಣ ಭಾರತ ಚಿತ್ರರಂಗದಕ್ಕೆ ದಿಶಾ ಮರಳಿದ್ದಾರೆ.

ತೆಲುಗಿನಲ್ಲಿ ಪ್ರಭಾಸ್ ಜೊತೆ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ದಿಶಾ, ತಮಿಳಿನ ಕನಗುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.