
ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಎಲ್ಲಿಲ್ಲದ ಪ್ರೀತಿ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಆರ್ಸಿಬಿಯನ್ನು ಬೆಂಬಲಿಸುತ್ತಾರೆ. ಈ ಸಾಲಿನಲ್ಲಿ ದಿವ್ಯಾ ಉರುಡುಗ ಕೂಡ ಇದ್ದಾರೆ.

ಇತ್ತೀಚೆಗೆ ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ ಸೋತಿದೆ. ಆದಾಗ್ಯೂ ಅಭಿಮಾನಿಗಳು ‘ಎಂದೆಂದಿಗೂ ಆರ್ಸಿಬಿ’ ಎನ್ನುವ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. ದಿವ್ಯಾ ಕೂಡ ಇದೇ ಪೋಸ್ಟ್ ಹಾಕಿದ್ದಾರೆ.

ಆರ್ಸಿಬಿ ಜರ್ಸಿ ತೊಟ್ಟಿರುವ ಅವರು, ‘ಎಂದೆಂದಿಗೂ ಆರ್ಸಿಬಿ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರಪೂರ ಪ್ರೀತಿ ಸಿಕ್ಕಿದೆ.

‘ನೀವು ಇಷ್ಟ, ಆರ್ಸಿಬಿ ಕೂಡ ಇಷ್ಟ. ನಿಮಗೂ ಆರ್ಸಿಬಿ ಇಷ್ಟ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಈ ಜರ್ಸಿ ನಿಮಗೆ ಚೆನ್ನಾಗಿ ಹೊಂದುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ದಿವ್ಯಾ ಉರುಡುಗ ಅವರು ಎರಡು ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟು ಬಂದಿದ್ದಾರೆ. ಅರವಿಂದ್ ಕೆಪಿ ಜೊತೆಗಿನ ಪ್ರೀತಿ ವಿಚಾರದಲ್ಲೂ ಅವರು ಸುದ್ದಿಯಲ್ಲಿದ್ದಾರೆ.
Published On - 8:34 am, Wed, 19 April 23