
ಮಾಜಿ ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ವಿದೇಶ ಪ್ರವಾಸದಿಂದ ವಾಪಸ್ ಆಗಿದ್ದಾರೆ.

ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಬಿಎಸ್ವೈ ಇಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಇದೇ ವೇಳೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಯಡಿಯೂರಪ್ಪ ಹಾಗೂ ಉಪಮುಖ್ಯಂತ್ರಿ ಡಿಕೆ ಶಿವಕುಮಾರ್ ಮುಖಾಮುಖಿಯಾದರು.

ಈ ವೇಳೆ ಡಿಕೆ ಶಿವಕುಮಾರ್ ಯಡಿಯೂರಪ್ಪರನ್ನು ಮಾತನಾಡಿಸಿ ಕೈ ಕುಲುಕಿರುವುದು ವಿಶೇಷ

ಅತ್ತ ದುಬೈನಿಂದ ಬಿಎಸ್ವೈ ಬಂದಿದ್ದರೆ, ಇತ್ತ ದೆಹಲಿಯಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿದರು. ವೇಳೆ ಉಭಯ ನಾಯಕರು ಮುಖಾಮುಖಿಯಾದರು.

ಬಳಿಕ ಇಬ್ಬರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡು ವಿಮಾನ ನಿಲ್ದಾಣದಿಂದ ತಮ್ಮ ತಮ್ಮ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಇನ್ನು ಯುರೋಪ್ ಪ್ರವಾಸಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸಹ ಬೆಂಗಳೂರಿಗೆ ವಾಪಸ್ ಆಗಿದ್ದಾರೆ

ವಿಧಾನಸಭೆ ಚುನಾವಣೆ ಬಳಿಕ ರಿಲ್ಯಾಕ್ಸ್ ಆಗಿ ಕುಟುಂಬ ಸಮೇತರಾಗಿ ಕುಮಾರಸ್ವಾಮಿ ಅವರು ಯುರೋಪ್ ಪ್ರವಾಸಕ್ಕೆ ಹೋಗಿದ್ದರು
Published On - 10:39 am, Fri, 4 August 23