ರಾಮನಗರದಲ್ಲಿ ಡಿಕೆ ಬ್ರದರ್ಸ್ ಶಕ್ತಿ ಪ್ರದರ್ಶನ: ಕಾಂಗ್ರೆಸ್ ರ‍್ಯಾಲಿಯಲ್ಲಿ ಜನವೋ ಜನ
ಬೆಂಗಳೂರು ಗ್ರಾಮಾಂತರ ಲೋಕಸಭಾ ರಣಕಣ ರಂಗೇರಿದೆ. ಕಾಂಗ್ರೆಸ್ ಏಕೈಕ ಸಂಸದ ಡಿಕೆ ಸುರೇಶ್ ಗುರುವಾರ ನಾಮೀನಶನ್ ಮಾಡಿದ್ದಾರೆ. ನಾಮೀನಶನ್ಗೂ ಮುನ್ನಾ ಟೆಂಪಲ್ ರನ್ ಮಾಡಿದ್ದ ಅವರು, ಮನೆದೇವತೆ ಕೆಂಕೇರಮ್ಮ, ಕಬ್ಬಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
1 / 5

2 / 5
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ರಾಮನಗರ ಡಿಸಿ ಕಚೇರಿಯಲ್ಲಿ ನನ್ನ ನಾಮಪತ್ರ ಸಲ್ಲಿಸಿದೆ. ಕ್ಷೇತ್ರದಲ್ಲಿ ಮತ್ತೊಮ್ಮೆ ನನ್ನ ಗೆಲುವಿನ ಝೇಂಕಾರ ಮೊಳಗುವುದು ನಿಶ್ಚಿತ ಎಂದು ಡಿಕೆ ಸುರೇಶ್ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಸುವಾಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
3 / 5
ನಾಮಪತ್ರ ಸಲ್ಲಿಕೆಗೂ ಮುನ್ನ ರಾಮನಗರದ ಜೂನಿಯರ್ ಕಾಲೇಜು ಮೈದಾನದಿಂದ ಡಿಸಿ ಕಚೇರಿವರೆಗೆ ಬೃಹತ್ ಮೆರವಣಿಗೆ ಮಾಡುವ ಮೂಲಕ ಸಂಸದ ಡಿಕೆ ಸುರೇಶ್ ತಮ್ಮ ಬಲಪ್ರದರ್ಶನ ಮಾಡಿದ್ದಾರೆ. ಈ ಜನಸಾಗರವೇ ಕಾಂಗ್ರೆಸ್ ಗೆಲುವಿಗೆ ಮುನ್ನುಡಿ ಎಂದು ಹೇಳಿದ್ದಾರೆ.
4 / 5
ಬಳಿಕ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಂಸದ ಡಿಕೆ ಸುರೇಶ್, ಕನ್ನಡಿಗರ ಭರವಸೆಯ ಕಾಂಗ್ರೆಸ್ ಮತ್ತೊಮ್ಮೆ ಕರುನಾಡಿನಲ್ಲಿ ಇತಿಹಾಸ ನಿರ್ಮಿಸಲಿದೆ. ಇದಕ್ಕೆ ಇಂದು ರಾಮನಗರದಲ್ಲಿ ಸೇರಿದ ಜನಸಾಗರವೇ ಸಾಕ್ಷಿ ಎಂದು ಹೇಳಿದ್ದಾರೆ.
5 / 5
ಈ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಂಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಸಚಿವರು, ಸ್ಥಳೀಯ ಶಾಸಕರು ಭಾಗಿಯಾಗಿದ್ದರು.
Published On - 6:31 pm, Thu, 28 March 24