- Kannada News Photo gallery Do you know how the fight of the young athletes who fought for the title in the state level kabaddi championship was like? See here
ರಾಜ್ಯ ಮಟ್ಟದ ಕಬ್ಬಡಿ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ ಯುವ ಕ್ರೀಡಾಪಟುಗಳ ಕಾದಾಟ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ
ದಾವಣಗೆರೆಯಲ್ಲಿ ನಡೆಸಿದ ರಾಜ್ಯಮಟ್ಟದ ಕಬ್ಬಡಿ ಚಾಂಪಿಯನ್ ಶಿಪ್ನಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಯುವಕ ಯುವತಿಯರು ಬಂದು ಪ್ರಶಸ್ತಿಗಾಗಿ ಕಾದಾಟ ನಡೆಸಿದರು.
Updated on: Jan 18, 2023 | 8:55 AM

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಜರುಗಿದ ರಾಜ್ಯಮಟ್ಟದ ಈ ಕಬ್ಬಡಿ ಚಾಂಪಿಯನ್ ಶಿಪ್ ಕಬ್ಬಡಿ ಪ್ರೇಮಿಗಳಿಗಳಿಗೆ ರಸದೌತಣ ಉಣಬಡಿಸಿತು. ಯುವಕ ಹಾಗು ಯುವತಿಯರು ಪ್ರಶಸ್ತಿಗಾಗಿ ಕಾದಾಟ ನಡೆಸಿದರು. ಬಂದಿದ್ದ ಜನರು ಕೇಕೆ ಶಿಳ್ಳೆ ಹಾಕುವ ಮೂಲಕ ಯುವ ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.

ಕರ್ನಾಟಕ ರಾಜ್ಯ ಹಾಗೂ ದಾವಣಗೆರೆ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಮತ್ತು ಶಾಸಕ ಎಸ್ ವಿ ರಾಮಚಂದ್ರ ಅಭಿಮಾನಿಗಳ ಬಳಗದಿಂದ ಆಯೋಜನೆ ಮಾಡಲಾಗಿದ್ದ ಕಬ್ಬಡಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಯುವಕ ಯುವತಿಯರು ಭಾಗಿಯಾಗಿದ್ದರು.

ಯುವತಿಯರ ಆಟ ನೋಡಿ ಗಂಡ್ ಹೈಕ್ಳು ಚಪ್ಪಾಳೆ ಶಿಳ್ಳೆ ಹೊಡೆಯುವ ಮೂಲಕ ಹುರಿದುಂಬಿಸಿದರು. ಇನ್ನು ಈ ಕಬ್ಬಡಿ ಚಾಂಪಿಯನ್ ಶಿಪ್ಗೆ ದಾವಣಗೆರೆ, ಹಾವೇರಿ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಉಡುಪಿ, ದ ಕನ್ನಡ, ಧಾರವಾಡ, ಕೊಡಗು, ಮಂಡ್ಯ, ಹಾಸನ, ಚಿತ್ರದುರ್ಗ ಹೀಗೆ ರಾಜ್ಯದಿಂದ ಒಟ್ಟು 50 ಕ್ಕು ಹೆಚ್ಚು ತಂಡಗಳು ಆಗಮಿಸಿದವು.

ಈ ಎಲ್ಲಾ ಕಬ್ಬಡಿ ತಂಡಗಳ ಪೈಕಿ ಒಂದು ಜಿಲ್ಲೆಯ ಯುವಕ ಹಾಗು ಯುವತಿಯರಿಗೆ ಪ್ರತ್ಯೇಕವಾಗಿ ಎರಡು ತಂಡಗಳಿಗೆ ಈ ಕಬ್ಬಡಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತು. ಇಂದು ಆರಂಭವಾಗಿರುವ ಈ ಕಬ್ಬಡಿ ಚಾಂಪಿಯನ್ ಶಿಪ್ ಒಟ್ಟು ಮೂರು ದಿನಗಳ ಕಾಲ ಜರಗಲಿದೆ ಎಂದು ಶಾಸಕ ಎಸ್ ವಿ ರಾಮಚಂದ್ರ ತಿಳಿಸಿದರು.

ಇನ್ನು ಕಬ್ಬಡಿ ಚಾಂಪಿಯನ್ ಶಿಪ್ನಲ್ಲಿ ಒಟ್ಟು 700 ಜನ ಯುವ ಕಬ್ಬಡಿ ಕ್ರೀಡಾಪಟುಗಳು ಭಾಗಿಯಾಗಿದ್ದರು, ಈ ರಾಜ್ಯಮಟ್ಟದ ಕಬ್ಬಡಿ ಚಾಂಪಿಯನ್ ಶಿಪ್ನಿಂದ ನ್ಯಾಷನಲ್ಗೆ ಒಟ್ಟು 24 ಜನರನ್ನ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಅಂದರೆ 12 ಯುವಕರು ಹಾಗೂ 12 ಯುವತಿಯರನ್ನ ಆಯ್ಕೆ ಮಾಡಲಾಗುತ್ತದೆ, ಇಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಸೋನಿಪತ್ನಲ್ಲಿ ಜರುಗುವ ನ್ಯಾಷನಲ್ ಕಬ್ಬಡಿ ಪಂದ್ಯದಲ್ಲಿ ಕರ್ನಾಟಕದ ಪರ ಆಡಲಿದ್ದಾರೆ.

ಒಟ್ಟಾರೆ ಇಂದಿನಿಂದ ಒಟ್ಟು ಮೂರು ದಿನಗಳ ಕಾಲ ಜರಗುವ ಈ ರಾಜ್ಯ ಮಟ್ಟದ ಕಬ್ಬಡಿ ಚಾಂಪಿಯನ್ ಶಿಪ್ನಲ್ಲಿ ನ್ಯಾಷನಲ್ಗೆ ಆಯ್ಕೆಯಾಗಲು ಯುವ ಕಬ್ಬಡಿ ಪಟುಗಳು ಅದ್ಭುತ ಪ್ರದರ್ಶನ ನೀಡಿದರು. ಅದೇನೆ ಆಗಲಿ ಕೊರೆಯುವ ಚಳಿಯಲು ಕಬ್ಬಡಿ ಆಟವಾಡುವ ಮೂಲಕ ಯುವ ಕ್ರೀಡಾಪಟುಗಳು ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಬ್ಬಡಿ ಪ್ರೇಮಿಗಳಿಗೆ ರಂಜಿಸಿದಂತು ಸುಳ್ಳಲ್ಲ.




