AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snakes Village: ಮನುಷ್ಯರೊಂದಿಗೆ ಹಾವುಗಳು ವಾಸಿಸುವ ಸ್ಥಳ ಯಾವುದು ಗೊತ್ತಾ..! ಇಲ್ಲಿದೆ ಕುತೂಹಲಕಾರಿ ಸಂಗತಿ

ಹಾವುಗಳ ಗ್ರಾಮ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಶೆಟ್ಪಾಲ್ ಎಂಬ ಗ್ರಾಮವಿದೆ. ಇಲ್ಲಿನ ಗ್ರಾಮದಲ್ಲಿ ಮನುಷ್ಯರೊಂದಿಗೆ ನಾನಾ ಬಗೆಯ ಹಾವುಗಳಿವೆ ವಾಸಿಸುತ್ತವೆ.

ಗಂಗಾಧರ​ ಬ. ಸಾಬೋಜಿ
|

Updated on:Mar 02, 2022 | 8:11 AM

Share
ಜನರಲ್ಲಿ ಹಾವುಗಳೆಂದರೆ ಅತಿ ಹೆಚ್ಚು ಭಯ. ಆದರೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಶೆಟ್ಪಾಲ್ ಎಂಬ ಗ್ರಾಮವಿದೆ. ಇಲ್ಲಿನ ಗ್ರಾಮದಲ್ಲಿ ಮನುಷ್ಯರೊಂದಿಗೆ ನಾನಾ ಬಗೆಯ ಹಾವುಗಳಿವೆ. ಇಲ್ಲಿ ಪ್ರತಿಯೊಬ್ಬರ ಕುಟುಂಬದಲ್ಲಿ ಹಾವುಗಳಿವೆ.ಈ ಗ್ರಾಮದಲ್ಲಿ ಮಕ್ಕಳು ಹಾವುಗಳೊಂದಿಗೆ ಆಟವಾಡುತ್ತಾರೆ.

1 / 5
ಶೆಟ್ಪಾಲ್​ ಗ್ರಾಮವನ್ನು ಹಾವುಗಳ ಗ್ರಾಮ ಎಂದು ಕರೆಯಲಾಗುತ್ತದೆ. ಗ್ರಾಮವು ಆರ್ಥಿಕವಾಗಿ ಹಿಂದುಳಿದಿದ್ದು, ಹಲವು ರೀತಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಇಲ್ಲಿನ ಜನರ ಜೊತೆಗೆ ಹಾವುಗಳೂ ಸಹ ವಾಸಿಸುತ್ತವೆ. ಇಲ್ಲಿ ಮನೆ ಬಾಗಿಲಿಗೆ ಹಾವುಗಳು ಕಾಣಸಿಗುತ್ತವೆ. ಈ ಗ್ರಾಮದಲ್ಲಿ ಹಾವುಗಳನ್ನು ಕುಟುಂಬದ ಸದಸ್ಯರು ಎಂದು ಪರಿಗಣಿಸಲಾಗುತ್ತದೆ.

2 / 5
Snakes Village: ಮನುಷ್ಯರೊಂದಿಗೆ ಹಾವುಗಳು ವಾಸಿಸುವ ಸ್ಥಳ ಯಾವುದು ಗೊತ್ತಾ..! ಇಲ್ಲಿದೆ ಕುತೂಹಲಕಾರಿ ಸಂಗತಿ

ಶೆಟ್ಪಾಲ್ ಗ್ರಾಮವು ಪುಣೆಯಿಂದ 200 ಕಿ.ಮೀ ದೂರದಲ್ಲಿದೆ. ಈ ಗ್ರಾಮ ನಾಗರ ಹಾವುಗಳ ವಾಸಸ್ಥಾನವಾಗಿದೆ. ಗ್ರಾಮಸ್ಥರು ಹಾವುಗಳಿಗೆ ಪೂಜೆ ಸಲ್ಲಿಸುತ್ತಾರೆ.

3 / 5
Snakes Village: ಮನುಷ್ಯರೊಂದಿಗೆ ಹಾವುಗಳು ವಾಸಿಸುವ ಸ್ಥಳ ಯಾವುದು ಗೊತ್ತಾ..! ಇಲ್ಲಿದೆ ಕುತೂಹಲಕಾರಿ ಸಂಗತಿ

ಈ ಗ್ರಾಮದ ಮಕ್ಕಳಿಗೆ ಹಾವಿನ ಭಯವೇ ಇಲ್ಲ. ಏಕೆಂದರೆ ಜನಸಾಮಾನ್ಯರಲ್ಲಿ ಹಾವುಗಳು ಬೆಳೆಯುತ್ತಿವೆ. ಅದಕ್ಕೇ ಮಕ್ಕಳು ಹಾವು ಕೊರಳಲ್ಲಿ ಹಾಕಿಕೊಂಡು ಓಡಾಡುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

4 / 5
Snakes Village: ಮನುಷ್ಯರೊಂದಿಗೆ ಹಾವುಗಳು ವಾಸಿಸುವ ಸ್ಥಳ ಯಾವುದು ಗೊತ್ತಾ..! ಇಲ್ಲಿದೆ ಕುತೂಹಲಕಾರಿ ಸಂಗತಿ

ಈ ಊರಿಗೆ ಹೋದರೆ ಹಾವು ಕಚ್ಚುತ್ತದೆ ಎಂಬ ಭಯ ಹಲವರದ್ದು. ಆದರೆ ಅಂತಹ ಸಂಗತಿಗಳು ನಡೆಯುವುದಿಲ್ಲ. ಇದುವರೆಗೆ ಒಂದೇ ಒಂದು ಹಾವು ಕಚ್ಚಿದ ಪ್ರಕರಣ ವರದಿಯಾಗಿಲ್ಲ.

5 / 5

Published On - 7:00 am, Wed, 2 March 22