ಒಡಿಶಾದ ಬುಡಕಟ್ಟು ಜನಾಂಗದವರಾದ ದ್ರೌಪದಿ ಮುರ್ಮು ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
2000ರಲ್ಲಿ ಅವರು ರಾಯಿರಂಗಪುರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಬಿಜು ಜನತಾ ದಳ (ಬಿಜೆಡಿ)-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯ ಸಚಿವರಾದರು.
1958 ಜೂನ್ 20ರಂದು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಉಪರಬೇದಾ ಗ್ರಾಮದಲ್ಲಿ ಸಂತಾಲ್ ಬುಡಕಟ್ಟು ಸಮುದಾಯದಲ್ಲಿ ಜನನ.
ಮುರ್ಮ ಅವರನ್ನು ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದಾಗ ಮೊದಲಿಗೆ ಚರ್ಚೆಯಾಗಿದ್ದು ಅವರ ಸಮುದಾಯದ ಬಗ್ಗೆ ಆಗಿತ್ತು
ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮುರ್ಮುವರು ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾದರು.
2015 ರಲ್ಲಿ ಮುರ್ಮು ಜಾರ್ಖಂಡ್‌ನ ರಾಜ್ಯಪಾಲರಾಗಿ ನೇಮಕಗೊಂಡರು. ಜಾರ್ಖಂಡ್ ಗವರ್ನರ್ ಆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು
ರಾಜಕೀಯ ಪ್ರವೇಶಕ್ಕಿಂತ ಮೊದಲು ಶಿಕ್ಷಕಿಯಾಗಿದ್ದರು