- Kannada News Photo gallery Tennis Star Novak Djokovic again became a trap for Corona was out of the US Open without getting infected
US Open: ಯುಎಸ್ ಓಪನ್ ಆಡಬೇಕೆಂದ ನೊವಾಕ್ ಜೊಕೊವಿಕ್; ಬರುವುದಾದರೆ ಈ ಕೆಲಸ ಮಾಡಿ ಎಂದ ಅಮೆರಿಕ
US Open: ಈ ಪಂದ್ಯಾವಳಿಗಾಗಿ ದೇಶದಲ್ಲಿ ಹೊರಡಿಸಲಾದ ಕೊರೊನಾ ನಿಯಮಗಳನ್ನು ಅನುಸರಿಸುವುದಾಗಿ ಯುಎಸ್ ಓಪನ್ ಆಯೋಜಕರು ಗುರುವಾರ ಹೇಳಿದ್ದಾರೆ, ಇದು ಜೊಕೊವಿಚ್ ಅವರ ಕಷ್ಟವನ್ನು ಹೆಚ್ಚಿಸಿದೆ.
Updated on:Jul 21, 2022 | 5:59 PM

ಟೆನಿಸ್ ಲೆಜೆಂಡ್ ನೊವಾಕ್ ಜೊಕೊವಿಕ್‌ಗೆ ಕೊರೊನಾ ಮತ್ತೊಮ್ಮೆ ಸಂಕಷ್ಟ ತಂದೊಡ್ಡಿದೆ. ಆಸ್ಟ್ರೇಲಿಯ ಓಪನ್ ನಂತರ ಜೊಕೊವಿಕ್‌ಗೆ ಯುಎಸ್ ಓಪನ್‌ನಲ್ಲಿ ಭಾಗವಹಿಸುವ ಸಾಧ್ಯತೆಗಳು ತೀರ ಕ್ಷೀಣವಾಗುತ್ತಿವೆ. ಅದಕ್ಕೆ ಪ್ರಮುಖ ಕಾರಣ ಕೊರೊನಾ.

ಯುಎಸ್ ಓಪನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ಜೊಕೊವಿಕ್ ಹೆಸರು ಸೇರಿತ್ತು. ಆದರೆ, ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ನಿರ್ಧಾರವಾಗಿರಲಿಲ್ಲ. ಈ ಪಂದ್ಯಾವಳಿಗಾಗಿ ದೇಶದಲ್ಲಿ ಹೊರಡಿಸಲಾದ ಕೊರೊನಾ ನಿಯಮಗಳನ್ನು ಅನುಸರಿಸುವುದಾಗಿ ಯುಎಸ್ ಓಪನ್ ಆಯೋಜಕರು ಗುರುವಾರ ಹೇಳಿದ್ದಾರೆ, ಇದು ಜೊಕೊವಿಚ್ ಅವರ ಕಷ್ಟವನ್ನು ಹೆಚ್ಚಿಸಿದೆ.

ಅಮೆರಿಕ ಇತ್ತೀಚೆಗೆ ತನ್ನ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಅಮೆರಿಕಕ್ಕೆ ಬರುವವರು ಕೊರೊನಾ ಪರೀಕ್ಷೆಯ ನೆಗೆಟಿವ್ ವರದಿಯನ್ನು ತೋರಿಸಬೇಕಾಗಿಲ್ಲ. ಆದರೆ, ಅವರು ಅಮೆರಿಕಕ್ಕೆ ಬಂದ ತಕ್ಷಣ ಲಸಿಕೆ ವರದಿಯನ್ನು ತೋರಿಸಬೇಕು, ಆಗ ಮಾತ್ರ ಅವರಿಗೆ ಪ್ರವೇಶ ಸಿಗುತ್ತದೆ.

ಜೊಕೊವಿಕ್ ಕೊರೊನಾ ಲಸಿಕೆ ಪಡೆದಿಲ್ಲ. ಹಾಗಾಗಿಯೇ ಅವರ ಅಮೆರಿಕ ಪ್ರವೇಶ ಕಷ್ಟ. 21 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದಿರುವ ಜೊಕೊವಿಕ್ ಈ ಬಗ್ಗೆ ಮಾತನಾಡಿದ್ದು, 'ಯುಎಸ್ ಓಪನ್‌ನ ಆಯೋಜಕರು ಲಸಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಮಾಡಿಲ್ಲ, ಆದರೆ ಆ ದೇಶದ ನಿಯಮಗಳ ಅನುಷ್ಠಾನದಿಂದಾಗಿ ನಾನು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, 'ಇಂದಿನ ಪರಿಸ್ಥಿತಿ ನೋಡಿದರೆ ನನಗೆ ಅಮೆರಿಕಕ್ಕೆ ಎಂಟ್ರಿ ಸಿಗುವುದಿಲ್ಲ. ಸದ್ಯಕ್ಕೆ ಏನಾಗುತ್ತೋ ಕಾದು ನೋಡಬೇಕು. ನಾನು ಅಲ್ಲಿಗೆ ಹೋಗಲು ಬಯಸುತ್ತೇನೆ ಮತ್ತು ನಾನು ಚೆನ್ನಾಗಿ ಆಡುತ್ತೇನೆ ಎಂದು ನನಗೆ ತಿಳಿದಿದೆ. ಸದ್ಯಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ. ಈ ನಿರ್ಧಾರವು ಯುಎಸ್ ಸರ್ಕಾರದ ಕೈಯಲ್ಲಿದೆ ಎಂದಿದ್ದಾರೆ.
Published On - 5:59 pm, Thu, 21 July 22
