
ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಚಹಾ ಪ್ರಿಯರು. ಆದರೆ ಹೆಚ್ಚು ಚಹಾ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಎಷ್ಟೋ ಅಧ್ಯಯನಗಳು ತಮ್ಮ ಸಂಶೋಧನೆಯಲ್ಲಿ ತಿಳಿಸಿದೆ. ಈಗಾಗಿ ನೀವು ಪ್ರತಿದಿನ ನಿಮ್ಮ ಚಹಾಕ್ಕೆ ಕರಿಮೆಣಸು ಹಾಕಿ ಕುಡಿದರೆ ಹೇಗಿರುತ್ತದೆ.

ಇದು ನಿಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಉಂಟು ಮಾಡುತ್ತದೆ. ಕರಿಮೆಣಸಿನಲ್ಲಿ ಬಹಳಷ್ಟು ಉತ್ಕರ್ಷಣ ನಿರೋಧಕಗಳು ಇರುತ್ತವೆ, ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಈ ಚಹಾ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಕರಿಮೆಣಸಿನ ಚಹಾ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿಡುತ್ತದೆ. ಕರಿಮೆಣಸು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಚಹಾಕ್ಕೆ ಕರಿಮೆಣಸನ್ನು ಸೇರಿಸುವುದರಿಂದ ಚಹಾದಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.

ಹೆಚ್ಚು ಕರಿಮೆಣಸಿನ ಚಹಾ ಕುಡಿಯುವುದರಿಂದ ಹೊಟ್ಟೆ ಕಿರಿಕಿರಿ ಉಂಟಾಗುತ್ತದೆ. ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಯಾವುದೇ ಪ್ರಯೋಗ ಮಾಡಿ.
Published On - 4:38 pm, Fri, 21 February 25