Dubai Aquarium in Sirsi: ಶಿರಸಿಯಲ್ಲಿ ದುಬೈ ಅಕ್ವೇರಿಯಂ! ಏನಿದರ ವಿಶೇಷತೆ?
ಅತ್ಯಾಕರ್ಷಕ ಲೈಟ್ ಗಳಿಂದ ಕೂಡಿರುವ ಟನಲ್.. ಟನಲ್ ಒಳಗಡೆ ವಿವಿಧ ಜಾತಿಯ ಮೀನುಗಳು. ಮೀನುಗಳ ಜೊತೆ ಸೆಲ್ಪೀ ಕ್ಲಿಕ್ಕಿಸುತ್ತಿರುವ ಜನ. ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಹೌದು ಶಿರಸಿ ಜಾತ್ರೆ ಮುಗಿದರೂ ಜನರ ದಂಡು ಮಾತ್ರ ಇವತ್ತಿಗೂ ಕಮ್ಮಿ ಆಗಿಲ್ಲ. ಜಾತ್ರೆಗೆ ಬರುವ ಅನೇಕರ ಆಕರ್ಷಣೀಯ ತಾಣವಾಗಿರುವುದು ದುಬೈ ಅಕ್ವೇರಿಯಂ
1 / 8
ಅದು ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ, ಜಾತ್ರೆ ಮುಗಿದು ನಾಲ್ಕು ದಿನ ಕಳೆದ್ರು ಜಾತ್ರೆಯ ಸಂಭ್ರಮ ಮಾತ್ರ ಇದುವರೆಗೂ ಮುಗಿದಿಲ್ಲ, ಬೇಸಿಗೆ ರಜೆ ಹಿನ್ನೆಲೆ ಕುಟಂಬ ಸಮೇತ ಜಾತ್ರೆಗೆ ಬರುತ್ತಿರುವ ಜನ ಆ ಅಕ್ವೇರಿಯಂ ವೀಕ್ಷಣೆ ಮಾಡುತ್ತಿದ್ದಾರೆ, ಅಷ್ಟಕ್ಕೂ ಆ ಅಕ್ವೇರಿಯಂ ವಿಶೇಷತೆ ಏನು ಎಂಬುದರ ಡಿಟೆಲ್ ರಿಪೊರ್ಟ್ ಇಲ್ಲಿದೆ ನೋಡಿ.
2 / 8
ಅತ್ಯಾಕರ್ಷಕ ಲೈಟ್ ಗಳಿಂದ ಕೂಡಿರುವ ಟನಲ್.. ಟನಲ್ ಒಳಗಡೆ ವಿವಿಧ ಜಾತಿಯ ಮೀನುಗಳು. ಮೀನುಗಳ ಜೊತೆ ಸೆಲ್ಪೀ ಕ್ಲಿಕ್ಕಿಸುತ್ತಿರುವ ಜನ. ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (Sirsi). ಹೌದು ಶಿರಸಿ ಜಾತ್ರೆ ಮುಗಿದರೂ ಜನರ ದಂಡು ಮಾತ್ರ ಇವತ್ತಿಗೂ ಕಮ್ಮಿ ಆಗಿಲ್ಲ. ಜಾತ್ರೆಗೆ ಬರುವ ಅನೇಕರ ಆಕರ್ಷಣೀಯ ತಾಣವಾಗಿರುವುದು ದುಬೈ ಅಕ್ವೇರಿಯಂ.
3 / 8
ಭಾರತ ಸೇರಿದಂತೆ ಬೇರೆ ಬೇರೆ ದೇಶದ 40ಕ್ಕೂ ಹೆಚ್ಚು ಜಾತಿಯ ಮೀನುಗಳನ್ನೊಳಗೊಂಡ ಈ ಟನಲ್. ಎಂತಹವರನ್ನೂ ಮಂತ್ರ ಮುಗ್ಧರಾಗಿಸುತ್ತದೆ. ದುಬೈ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಅಂಡರ್ ವಾಟರ್ ಟನಲ್ ಗಳನ್ನ ನಿರ್ಮಾಣ ಮಾಡಿ, ಜಲಚರಗಳನ್ನು ಕಾಣಲು ಜನರಿಗೆ ಅವಕಾಶ ಮಾಡಿ ಕೊಡಲಾಗಿದೆ.
4 / 8
ಆದ್ರೆ ನಮ್ಮ ದೇಶದಲ್ಲಿ ಟನಲ್ ನಲ್ಲಿ ಹೋಗಿ ಜಲಚರಗಳನ್ನು ನೋಡುವುದು ಭಾರಿ ವಿರಳ. ಹಾಗಾಗಿ, ಭಾರತದಲ್ಲಿನ ಸಾಮಾನ್ಯ ಜನರಿಗೂ ಟನಲ್ ನಲ್ಲಿ ಜಲಚರಗಳು ಯಾವ ರೀತಿ ಕಾಣುತ್ತದೆ ಎಂಬುವುದನ್ನು ತೋರಸಲಿಕ್ಕೆ ದುಬೈ ಅಕ್ವಾರಿಯಂ ಎಂಡ್ ಟಿಂ ಶಿರಸಿ ಜಾತ್ರೆಯಲ್ಲಿ ಟೆಂಟ್ ಹಾಕಿದ್ದು, ಜನರು ಎಂಜಾಯ್ ಮಾಡುತ್ತಿದ್ದಾರೆ.
5 / 8
ಇನ್ನು ಪ್ರತಿ ವರ್ಷ ಜೋಕಾಲಿ, ಸಿಹಿ ತಿಂಡಿಗಳೊಂದಿಗೆ ಜಾತ್ರೆ ಎಂಜಾಯ್ ಮಾಡುತ್ತಿದ್ದ ಜನ ಈ ಬಾರಿ ದುಬೈ ಅಕ್ವೇರಿಯಂ ಕಂಡು ನಿಜಕ್ಕೂ ಫುಲ್ ಖುಷ್ ಆಗಿದ್ದಾರೆ. ನಾವು ಇದ್ದಲ್ಲಿಗೇ ದೇಶ ವಿದೇಶದ ಮೀನುಗಳು ಕಾಣಸಿಗುತ್ತಿದ್ದನ್ನು ತಿಳಿದು ಬೇಸಿಗೆ ರಜೆ ಹಿನ್ನೆಲೆ ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ದುಬೈ ಅಕ್ವೇರಿಯಂಗೆ ಬಂದು, ಬೇರೆ ಬೇರೆ ಜಾತಿಯ ಮೀನುಗಳನ್ನು ನೋಡುತ್ತಿದ್ದಾರೆ.
6 / 8
7 / 8
ಇನ್ನೂ ವಿಶೇಷ ಅಂದ್ರೆ ಇಲ್ಲಿ ಇರುವ ಕೆಲವು ಮೀನುಗಳ ಬೆಲೆ ತಲಾ 2 ರಿಂದ 3 ಲಕ್ಷದವರೆಗೆ ಇದೆ. ಆ ಮೀನುಗಳು ಮಾಂಸವನ್ನ ಸೇವನೆ ಮಾಡುತ್ತವೆ! ಅತಿ ದೊಡ್ಡ ಗಾತ್ರದಲ್ಲಿ ಬೆಳೆಯುವ ಮೀನುಗಳಾಗಿದ್ದು ಈ ಮೀನುಗಳು ತಿನ್ನಲು ಯೋಗ್ಯವಲ್ಲ. ಆದ್ರೆ ಅವುಗಳ ಗಾತ್ರ ಮತ್ತು ಚಲನವಲನ ಕಂಡು ಎಂತವರಿಗೂ ಖುಷಿ ಆಗುತ್ತೆ.
8 / 8
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಲವತ್ತಕ್ಕೂ ಹೆಚ್ಚು ಜಾತಿಯ ಮೀನುಗಳು, ಅಂಡರ್ ವಾಟರ್ ನಲ್ಲಿನ ಫೀಲ್ ಆಗುವಂತೆ ಟನಲ್ ನಲ್ಲಿ ಅಕ್ವೇರಿಯಂ ನಿರ್ಮಾಣ ಮಾಡಿದ್ದು ಇಲ್ಲಿನ ಜನರಿಗೆ ಭಾರಿ ಖುಷಿ ತಂದಿದೆ.