
ಸ್ಯಾಂಡಲ್ವುಡ್ ನಟಿ ರೀಷ್ಮಾ ನಾಣಯ್ಯ ಇದೀಗ ಸ್ಟಾರ್ಗಳ ಚಿತ್ರಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ರೀಷ್ಮಾ ಪಾತ್ರದ ಅನಾವರಣ ಮಾಡಲಾಗಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಇಬ್ಬರು ನಾಯಕಿಯರಿದ್ದಾರೆ. ಅದರಲ್ಲಿ ರೀಷ್ಮಾ ಕೂಡ ಓರ್ವರು.

ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ರೀಷ್ಮಾ ‘ಕಾದಂಬರಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಬಾನದಾರಿಯಲ್ಲಿ’ ಚಿತ್ರದಲ್ಲಿ ರೀಷ್ಮಾ ಅವರು ವನ್ಯಜೀವಿ ಛಾಯಾಗ್ರಾಹಕಿಯಾಗಿ ಬಣ್ಣಹಚ್ಚಲಿದ್ದಾರೆ. ಈ ಕುರಿತ ಎರಡು ಪೋಸ್ಟರ್ಗಳನ್ನು ರಿಲೀಸ್ ಮಾಡಲಾಗಿದ್ದು, ಅವುಗಳು ಸಿನಿಮಾ ಪ್ರೇಮಿಗಳ ಮನಗೆದ್ದಿವೆ.

‘ಏಕ್ ಲವ್ ಯಾ’ ಮೂಲಕ ಗುರುತಿಸಿಕೊಂಡ ನಟಿಗೆ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರು ಆಕ್ಟಿವ್ ಆಗಿದ್ದಾರೆ.

ಹೊಸ ಹೊಸ ಫೋಟೋಶೂಟ್ಗಳನ್ನು ಮಾಡಿಸಿಕೊಳ್ಳುವ ನಟಿ ಅದನ್ನು ಹಂಚಿಕೊಳ್ಳುತ್ತಿರುತ್ತಾರೆ.

ರೀಷ್ಮಾ ಹಂಚಿಕೊಂಡಿರುವ ಕ್ಯೂಟ್ ಫೋಟೋಗಳು ಇಲ್ಲಿವೆ.

ಮೊದಲ ಚಿತ್ರದಲ್ಲೇ ಗಮನ ಸೆಳೆದ ರೀಷ್ಮಾಗೆ ಈಗ 21ರ ಹರೆಯ. ಇದೀಗ ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಿರುವ ನಟಿ ಶೀಘ್ರದಲ್ಲೇ ಮತ್ತಷ್ಟು ಬ್ಯುಸಿಯಾಗುವ ಲಕ್ಷಣಗಳಿವೆ.

ಈ ನಿಟ್ಟಿನಲ್ಲಿ ‘ಬಾನದಾರಿಯಲ್ಲಿ’ ಚಿತ್ರ ರೀಷ್ಮಾ ಪಾಲಿಗೆ ಪ್ರಮುಖವಾಗಿದೆ. ಅದರಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಅಭಿನಯಕ್ಕೆ ಮತ್ತಷ್ಟು ಅವಕಾಶ ಸಿಗುವ ಸಾಧ್ಯತೆ ಇದೆ.

ಮೇ 25ರಿಂದ ‘ಬಾನದಾರಿಯಲ್ಲಿ’ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರು, ಚೆನ್ನೈ, ವಾರಣಾಸಿ ಹಾಗೂ ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯಲಿದೆ.

ರೀಷ್ಮಾ ನಾಣಯ್ಯ