Updated on:Mar 01, 2023 | 1:04 PM
ಬೆಂಗಳೂರಲ್ಲಿ ಉದ್ಘಾಟನೆಗೊಂಡಿದೆ ಮೊದಲ ಸ್ಮರ್ಟ್ ಬಸ್ ನಿಲ್ದಾಣ
ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಸೋಮವಾರ (ಫೆ.27) ರಂದು ರಾಜಧಾನಿಯ ಮೊದಲ ಎಲೆಕ್ಟ್ರಿಕ್ ಬಸ್ ನಿಲ್ದಾಣವನ್ನು ಉದ್ಘಾಟಿಸಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಮತ್ತು ಬೆಂಗಳೂರಿನ ಸಂಚಾರ ವಿಶೇಷ ಪೊಲೀಸ್ ಆಯುಕ್ತ ಡಾ ಎಂ.ಎ ಸಲೀಂ ಭಾಗಿಯಾಗಿದ್ದರು.
ಇನ್ಫೋಸಿಸ್ ಅವೆನ್ಯೂ ಬಳಿಯ ವಿಮಾನ ನಿಲ್ದಾಣದ ಬಸ್ ಟರ್ಮಿನಸ್‌ನಲ್ಲಿ ಸ್ಮಾರ್ಟ್ ಬಸ್ ನಿಲ್ದಾಣವಿದ್ದು, ಈ ಬಸ್ ನಿಲ್ದಾಣ ತಿಂಡಿಗಳನ್ನು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮಾರಾಟ ಯಂತ್ರಗಳು, ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಸ್ಮಾರ್ಟ್ ಡಸ್ಟ್‌ಬಿನ್‌ಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.
ಬಸ್ ಸಮಯಗಳ ಬಗ್ಗೆ ನೈಜ-ಸಮಯದ ಮಾಹಿತಿಗಾಗಿ ಎಲೆಕ್ಟ್ರಿಕ್ ಬೋರ್ಡ್ ಅಳವಡಿಸಲಾಗಿದೆ. ಇದರಲ್ಲಿ ಬಸ್ ಸಮಯ ನೋಡಬಹುದು.
ಸ್ಮಾರ್ಟ್ ಬಸ್ ನಿಲ್ದಾಣವು ಬಸ್ ಮಾರ್ಗ ನಕ್ಷೆಯನ್ನು, ಸ್ಮಾರ್ಟ್ ಡಸ್ಟ್‌ಬಿನ್‌ಗಳನ್ನು ಹೊಂದಿದ್ದು ಅದು ಶೇ 70 ರಷ್ಟು ತುಂಬಿದಾಗ ಸಂದೇಶ ನೀಡುತ್ತದೆ. ಸುರಕ್ಷತೆ ಸಂಬಂಧ ಬಸ್ ನಿಲ್ದಾಣದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ದ್ವಿಮುಖ SOS ವ್ಯವಸ್ಥೆಯೊಂದಿಗೆ ಅಳವಡಿಸಲಾಗಿದೆ.
Published On - 1:03 pm, Wed, 1 March 23