ಒಂದೆಡೆ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಮಾರ್ಜಲ ನಡಿಗೆ, ಮತ್ತೊಂದೆಡೆ ಅದೆ ವಿದ್ಯಾರ್ಥಿನಿಯರಿಗೆ ಪಾಠ ಮಾಡುವ ಉಪನ್ಯಾಸಕಿಯರ ಕಲರ್ ಪುಲ್ ಕ್ಯಾಟ್ ವಾಕ್. ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರ ಕಲರ್ ಪುಲ್ ಕ್ಯಾಟ್ ವಾಕ್ ನೋಡಿ ಸಿಳ್ಳೆ ಕೇಕೆ ಹಾಕಿ ಹುರಿದುಂಬಿಸುತ್ತಿರುವ ವಿದ್ಯಾರ್ಥಿಗಳು. ಇಂಥ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರದಲ್ಲಿ.
ಹೌದು, ಚಿಕ್ಕಬಳ್ಳಾಪುರದ ಖಾಸಗಿ ಇಂಜನಿಯರಿಂಗ್ ಕಾಲೇಜಿನ ಸಂಭ್ರಮ-2023 ಕಾರ್ಯಕ್ರಮದ ಅಂಗವಾಗಿ ದಿನಕ್ಕೊಂದು, ಕ್ಷಣಕ್ಕೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು. ನಿನ್ನೆ(ಜೂ.3) ವಿದ್ಯಾರ್ಥಿನಿಯರ ಹಾಗೂ ಉಪನ್ಯಾಸಕಿಯರ ಕಲರ್ ಪುಲ್ ಕ್ಯಾಟ್ ವಾಕ್ ನಡೆಯಿತು.
ಇನ್ನೂ ಕಾಲೇಜಿನ ವಿದ್ಯಾರ್ಥಿಗಳ ಮನರಂಜನೆಗಾಗಿ ಆಡಳಿತ ಮಂಡಳಿ ಡಿ.ಜೆ ನೃತ್ಯ ಆಯೋಜನೆ ಮಾಡಿದ್ದು, ಕುಣಿದು ಕುಪ್ಪಳಿಸಿದರು.
ಹೌದು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗಂಟೆಗಳಿಗೂ ಹೆಚ್ಚು ಕಾಲ ಕನ್ನಡ ಹಿಂದಿ ತೆಲುಗು ತಮಿಳು ಸೇರಿದಂತೆ ವಿವಿಧ ಡಿ.ಜೆ ಹಾಗೂ ಪಾರ್ಟಿ ಸಾಂಗ್ಸ್ಗೆ ಮನಸ್ಸೊ ಇಚ್ಚೆ ಕುಣಿದು ಡ್ಯಾನ್ಸ್ ಮಾಡಿದ್ರು.
ವಿದ್ಯಾರ್ಥಿನಿಯರಂತೂ ಸಿಕ್ಕಿದ್ದೆ ಚಾನ್ಸ್ ಎಂದು, ಕುಣಿದು ಕುಣಿದು ಸುಸ್ತಾಗಿ ತೂರಾಡಿದ್ರು. ತಮ್ಮ ಸಂತಸವನ್ನು ಹಂಚಿಕೊಂಡರು.
ಪ್ರತಿದಿನ 4 ಗೋಡೆಗಳ ಮಧ್ಯೆ ವಿದ್ಯಾಭ್ಯಾಸದಲ್ಲಿ ತೊಡಗುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜು ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಕಲೆ ಸಂಸ್ಕೃತಿ ಸಂಪ್ರದಾಯಗಳ ಸಮ್ಮಿಲನದಲ್ಲಿ ಬಾಗಿಯಾಗಿದ್ದು ವಿಶೇಷವಾಗಿತ್ತು.
Published On - 9:11 am, Sun, 4 June 23