- Kannada News Photo gallery Cricket photos Team India Players Practicing in coloured rubber balls at the Arundel Cricket Club for WTC 2023 Final
WTC Final 2023: ಟೀಮ್ ಇಂಡಿಯಾ ಮಾಸ್ಟರ್ ಪ್ಲಾನ್: ಬೇರೆಬೇರೆ ಬಣ್ಣಗಳ ಚೆಂಡಿನಲ್ಲಿ ಅಭ್ಯಾಸ
IND vs AUS: ಟೀಮ್ ಇಂಡಿಯಾ ಆಟಗಾರರು ಕ್ಯಾಚ್ ಅಭ್ಯಾಸಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭಾರತದ ಎಲ್ಲ ಪ್ಲೇಯರ್ಸ್ ಬೇರೆಬೇರೆ ಬಣ್ಣಗಳ ಚೆಂಡುಗಳಲ್ಲಿ ಕ್ಯಾಚಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂದಿದೆ.
Updated on: Jun 04, 2023 | 7:19 AM

ಐಪಿಎಲ್ ಮುಗಿದ ಬೆನ್ನಲ್ಲೇ ಅಭಿಮಾನಿಗಳು ಮತ್ತೊಂದು ಕ್ರಿಕೆಟ್ ಹಬ್ಬಕ್ಕೆ ಕಾದು ಕುಳಿತಿದ್ದಾರೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಏರ್ಪಡಿಸಲಾಗಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗುತ್ತಿದೆ.

ಈಗಾಗಲೇ ಲಂಡನ್ನಲ್ಲಿ ಬೀಡುಬಿಟ್ಟಿರುವ ರೋಹಿತ್ ಪಡೆ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ನಾನಾ ವಿಧದಲ್ಲಿ ಅಭ್ಯಾಸ ನಡೆಸುತ್ತಿದೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

ಇದರ ನಡುವೆ ಟೀಮ್ ಇಂಡಿಯಾ ಆಟಗಾರರು ಕ್ಯಾಚ್ ಅಭ್ಯಾಸಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭಾರತದ ಎಲ್ಲ ಪ್ಲೇಯರ್ಸ್ ಬೇರೆಬೇರೆ ಬಣ್ಣಗಳ ಚೆಂಡುಗಳಲ್ಲಿ ಕ್ಯಾಚಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂದಿದೆ.

ಇದಕ್ಕೆ ಕಾರಣವಿದೆ. ಭಾರತೀಯ ಆಟಗಾರರು ಸುಮಾರು ಎರಡು ತಿಂಗಳುಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಆಡಿದ್ದಾರೆ. ಇಲ್ಲಿ ಬಿಳಿ ಬಣ್ಣದ ಚೆಂಡನ್ನು ಉಪಯೋಗಿಸಿದ್ದಾರೆ. ಹೀಗಾಗಿ ಕೆಂಪು ಚೆಂಡಿನ ಬಳಕೆಗೆ ಒಗ್ಗಿಸುವ ಹಾದಿಯಲ್ಲಿ ಇದೊಂದು ತಂತ್ರವಾಗಿದೆ.

ಈ ಬಗ್ಗೆ ಮಾತನಾಡಿದ ಫೀಲ್ಡಿಂಗ್ ಕೋಚ್, ನಮ್ಮ ಆಟಗಾರರಿಗೆಂದು ವಿಶೇಷವಾಗಿ ತಯಾರು ಮಾಡಿದ ರಬ್ಬರ್ ಚೆಂಡುಗಳಿವು. ಇವುಗಳನ್ನು ಗಲ್ಲಿ ಕ್ರಿಕೆಟ್‌ನಲ್ಲಿ ಬಳಸುವುದಿಲ್ಲ. ಫೀಲ್ಡಿಂಗ್ ಅಭ್ಯಾಸಕ್ಕಾಗಿಯೇ ಸಿದ್ಧಗೊಂಡಿವೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಈ ಚೆಂಡುಗಳನ್ನು ಹೆಚ್ಚು ಬಳಸುತ್ತಾರೆ ಎಂದು ಹೇಳಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಜೂನ್ 7ಕ್ಕೆ ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಶುರುವಾಗಲಿದೆ. 2021ರಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಎದುರು ಮುಗ್ಗರಿಸಿತ್ತು. ಇದೀಗ ಟೀಮ್ ಇಂಡಿಯಾ ಮತ್ತೊಮ್ಮೆ ಫೈನಲ್‌ಗೆ ದಾಪುಗಾಲಿಟ್ಟಿದ್ದು, ಪ್ರಶಸ್ತಿ ಜಯಿಸುವ ಕನಸಿನಲ್ಲಿದೆ.
