- Kannada News Photo gallery Father spits on daughters breasts during A wedding in the masai tribe at kenya
ಈ ಜನಾಂಗದಲ್ಲಿ ಮದ್ವೆ ಬಳಿಕ ತಂದೆ ವಧುವಿಗೆ ಉಗುಳುತ್ತಾರೆ, ಮಗಳು ಕೂಡ ಉಗುಳನ್ನು ಆಶೀರ್ವಾದ ಎಂದು ಪರಿಗಣಿಸುತ್ತಾಳೆ
ವಿವಾಹ ಸಂಪ್ರದಾಯಗಳು ಪ್ರತಿ ಸಮುದಾಯ, ಧರ್ಮಗಳಲ್ಲಿ ಭಿನ್ನವಾಗಿರುತ್ತವೆ. ಇನ್ನು ಹೊಸದಾಗಿ ಮದುವೆಯಾದಾಗ, ಗುರು- ಹಿರಿಯರು ವಧು-ವರರಿಗೆ ಅವರಿಗೆ ಆಶೀರ್ವಾದ ಮಾಡುವುದು ಸಾಮಾನ್ಯ. ಆದ್ರೆ, ಇಲ್ಲೊಂದು ಬುಡಕಟ್ಟು ಜನಾಂಗದಲ್ಲಿ ಮದುವೆಯ ನಂತರ ವಧುವಿನ ತಂದೆ ತನ್ನ ಮಗಳ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾರೆ. ಅಚ್ಚರಿ ಅನ್ನಿಸಿದರೂ ಸತ್ಯ. ವಿಚಿತ್ರ ರೀತಿಯಲ್ಲಿ ಆಶೀರ್ವದಿಸುವ ಒಂದು ಬುಡಕಟ್ಟು ಜನಾಂಗವಿದೆ. ಆ ಜನಾಂಗದ ಬಗ್ಗೆ ಮಾಹಿತಿ ಇಲ್ಲಿದೆ.
Updated on:Feb 05, 2023 | 5:07 PM

ಕೀನ್ಯಾದಲ್ಲಿ ಮದುವೆಯ ನಂತರ ವಧುವನ್ನು ವಿಚಿತ್ರ ರೀತಿಯಲ್ಲಿ ಆಶೀರ್ವದಿಸುವ ಒಂದು ಬುಡಕಟ್ಟು ಜನಾಂಗವಿದೆ. ಈ ಬುಡಕಟ್ಟು ಜನಾಂಗದವರು ವಧುವನ್ನು ಉಗುಳುವ ಮೂಲಕ ಆಶೀರ್ವದಿಸುತ್ತಾರೆ. ಇದರಿಂದ ಅವರ ಮುಂದಿನ ಜೀವನವು ಸಂತೋಷ ಮತ್ತು ಪ್ರೀತಿಯಿಂದ ಕೂಡಿರುತ್ತದೆ ಎಂದು ನಂಬಲಾಗಿದೆ.

ಕೀನ್ಯಾದ ಬುಡಕಟ್ಟು ಜನಾಂಗದಲ್ಲಿ, ಮದುವೆಯ ಸಮಯದಲ್ಲಿ ವಧುವಿನ ತಂದೆ ತನ್ನ ಮಗಳ ತಲೆಯ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾನೆ. ಮದುವೆಯಾದ ಹುಡುಗಿಯ ತಲೆ ಮತ್ತು ಎದೆಯ ಮೇಲೆ ಉಗುಳುವ ಮೂಲಕ ಆಶೀರ್ವಾದವನ್ನು ನೀಡುವುದು ಈ ಜನಾಂಗದಲ್ಲಿ ವಾಡಿಕೆ.

ಮಗಳು ಕೂಡ ಈ ತಂದೆಯ ಉಗುಳನ್ನು ತನ್ನ ಆಶೀರ್ವಾದ ಎಂದು ಪರಿಗಣಿಸುತ್ತಾಳೆ. ಈ ರೀತಿ ಮಾಡುವುದರಿಂದ ಮುಂದಿನ ಜೀವನದಲ್ಲಿ ಸಮೃದ್ಧಿ ಉಳಿಯುತ್ತದೆ ಮತ್ತು ಮಗಳ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.

ಕೀನ್ಯಾದ ಬುಡಕಟ್ಟು ಜನರು ಉಗುಳುವುದು ತುಂಬಾ ಮಂಗಳಕರವೆಂದು ಪರಿಗಣಿಸುತ್ತಾರೆ. ಇದು ಅವರ ಸಂಸ್ಕೃತಿ ಮತ್ತು ಸಮಾಜದ ಭಾಗವಾಗಿದೆ. ಇದಲ್ಲದೆ, ತಾಂಜಾನಿಯಾದ ಬುಡಕಟ್ಟುಗಳಲ್ಲಿ ಉಗುಳುವ ಸಂಪ್ರದಾಯವನ್ನು ಕಾಣಬಹುದು. ಇಲ್ಲಿನ ಜನರು ಅದನ್ನು ಗೌರವವಾಗಿ ಕಾಣುತ್ತಾರೆ.

ಮಸಾಯಿ ಬುಡಕಟ್ಟು ಜನಾಂಗದಲ್ಲಿ ಕೇವಲ ಮದುವೆ ಸಮಯದಲ್ಲಿ ಉಗುಳುವುದು ಮಾತ್ರವಲ್ಲದೇ ಯಾರನ್ನಾದರೂ ಸ್ವಾಗತಿಸುವಾಗ ಕೈಕುಲುಕುವ ಮೊದಲು ಅಂಗೈ ಮೇಲೆ ಉಗುಳುವುದು. ಮದುವೆಯ ಸಮಯದಲ್ಲಿ ಮನೆಯವರು ಮಗಳನ್ನು ಕಳುಹಿಸಿದಾಗ, ಮಗಳು ಹಿಂತಿರುಗಿ ನೋಡದಂತೆ ಆದೇಶಿಸಲಾಗುತ್ತದೆ.

ಜನಾಂಗದ ಈ ಸಂಪ್ರದಾಯ ವಾಕರಿಕೆ ಬರಿಸುತ್ತದೆ. ಮದುವೆಯ ದಿನ ವಧುವಿನ ತಲೆಗೂದಲನ್ನು ಬೋಳಿಸಿ ಕುರಿಯ ಕೊಬ್ಬು ಮತ್ತು ಎಣ್ಣೆಯಿಂದ ತಲೆಯನ್ನು ಸವರಲಾಗುತ್ತದೆ. ಬಳಿಕ ವಧುವಿನ ತಂದೆ ಮಗಳ ತಲೆಯ ಮತ್ತು ಸ್ತನಗಳ ಮೇಲೆ ಉಗುಳುವ ಮೂಲಕ ಆಶೀರ್ವಾದ ಮಾಡುತ್ತಾನೆ.

ಮದುವೆಯ ಸಮಯದಲ್ಲಿ ಮನೆಯವರು ಮಗಳನ್ನು ಕಳುಹಿಸಿದಾಗ, ಮಗಳು ಹಿಂತಿರುಗಿ ನೋಡದಂತೆ ಆದೇಶಿಸಲಾಗುತ್ತದೆ.

ಇದಲ್ಲದೇ ಮಸಾಯಿ ಬುಡಕಟ್ಟು ಜನಾಂಗದವರು ತಮ್ಮ ಉಡುಗೆ ತೊಡುಗೆಗಳಿಗೂ ಬಹಳ ಪ್ರಸಿದ್ಧರಾಗಿದ್ದಾರೆ.
Published On - 4:58 pm, Sun, 5 February 23




