ಮೆಸ್ಸಿ, ರೊನಾಲ್ಡೊ, ನೇಮಾರ್ ಅಲ್ಲವೇ ಅಲ್ಲ; ಫುಟ್ಬಾಲ್ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರ ಯಾರು ಗೊತ್ತಾ?

Edited By:

Updated on: Nov 20, 2022 | 11:30 AM

FIFA World Cup 2022: ಬೊಲ್ಕಿಯಾ ಬ್ರೂನಿಯ ರಾಜ ಮನೆತನದವರು. ಅವರು ಪ್ರಸ್ತುತ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಸೋದರಳಿಯ. ಅವರ ತಂದೆ ಜೆಫ್ರಿ ಪ್ರಿನ್ಸ್.

1 / 5
ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ನೇಮಾರ್, ಕೈಲಿಯನ್ ಎಂಬಪ್ಪೆ... ಸದ್ಯ ಫುಟ್ಬಾಲ್ ಜಗತ್ತನ್ನು ಆಳುತ್ತಿರುವ ಹೆಸರುಗಳಿವು. ಗಳಿಕೆಯಲ್ಲೂ ಈ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಆದರೆ ಸಂಪತ್ತಿನ ವಿಷಯದಲ್ಲಿ ಇವರೆಲ್ಲರನ್ನೂ ಮೀರಿಸಿದ ಆಟಗಾರನೊಬ್ಬನಿದ್ದಾನೆ. ಈ ಆಟಗಾರ ಈ ದಿಗ್ಗಜರಂತೆ ಫುಟ್ಬಾಲ್ ಜಗತ್ತಿನಲ್ಲಿ ಖ್ಯಾತಿಯನ್ನು ಗಳಿಸಲು ಸಾಧ್ಯವಾಗದಿದ್ದರೂ, ಈ ದಿಗ್ಗಜರನ್ನೂ ಮೀರಿಸಿದ ಶ್ರೀಮಂತರಾಗಿದ್ದಾರೆ.

2 / 5

ಈ ಆಟಗಾರನ ವಯಸ್ಸು ಕೂಡ ಕೇವಲ 24 ವರ್ಷಗಳು. ಆದರೂ ಶ್ರೀಮಂತಿಕೆಯಲ್ಲಿ ಈ ಆಟಗಾರನನ್ನು ಹಿಂದಿಕ್ಕುವ ಮತ್ತೊಬ್ಬ ಫುಟ್ಬಾಲ್ ಆಟಗಾರನಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

3 / 5

2022 ರಲ್ಲಿ ಹೊರಬಿದ್ದ ಮಾಹಿತಿಯ ಪ್ರಕಾರ ಅರ್ಜೆಂಟೀನಾದ ಸ್ಟಾರ್ ಆಟಗಾರ ಮೆಸ್ಸಿ ಅವರ ನಿವ್ವಳ ಮೌಲ್ಯ ಸುಮಾರು 4900 ಕೋಟಿ ರೂ. ಆಗಿದೆ. ಹಾಗೆಯೇ ರೊನಾಲ್ಡೊ ಅವರ ನಿವ್ವಳ ಮೌಲ್ಯ ಸುಮಾರು 4,000 ಕೋಟಿ ರೂ.ಗಳಾಗಿದೆ. ಆದರೆ ಈ ಇಬ್ಬರನ್ನೂ ಮೀರಿಸುವ ಮತ್ತೊಬ್ಬ ಆಟಗಾರನಿದ್ದಾನೆ.

4 / 5

ಈ ಶ್ರೀಮಂತ ವೃತ್ತಿಪರ ಫುಟ್ಬಾಲ್ ಆಟಗಾರ ಮತ್ತ್ಯಾರು ಅಲ್ಲ, ಮಿಡ್‌ಫೀಲ್ಡರ್ ಫೈಕ್ ಬೊಲ್ಕಿಯಾ. ಫುಟ್ಬಾಲ್ ಜಗತ್ತಿನಲ್ಲಿ ಅಷ್ಟಾಗಿ ಹೆಸರು ಮಾಡದ ಬೊಲ್ಕಿಯಾ ಥೈಲ್ಯಾಂಡ್‌ನ ಚೊನ್‌ಬುರಿಯಲ್ಲಿರುವ ಕ್ಲಬ್‌ ಪರ ಫುಟ್ಬಾಲ್ ಆಡುತ್ತಾರೆ. ಅವರ ನಿವ್ವಳ ಮೌಲ್ಯ ಸುಮಾರು 1700 ಟ್ರಿಲಿಯನ್ ರೂಪಾಯಿಗಳು.

5 / 5

ಬೊಲ್ಕಿಯಾ ಬ್ರೂನಿಯ ರಾಜ ಮನೆತನದವರು. ಅವರು ಪ್ರಸ್ತುತ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಸೋದರಳಿಯ. ಅವರ ತಂದೆ ಜೆಫ್ರಿ ಪ್ರಿನ್ಸ್. ಬೋಲ್ಕಿಯಾ ಬ್ರೂನಿ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕರೂ ಆಗಿದ್ದಾರೆ.

Published On - 11:30 am, Sun, 20 November 22

Loading...
Unable to load recommendations.
Follow Us