ಐಪಿಎಲ್​ ತಂಡವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿರುವ ಮೆಸ್ಸಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?

Edited By:

Updated on: Dec 14, 2022 | 5:40 PM

Lionel Messi: ಕೇವಲ ಫುಟ್‌ಬಾಲ್‌ನಿಂದಲೇ ಮೆಸ್ಸಿಯ ಒಟ್ಟು ಗಳಿಕೆಯು $75 ಮಿಲಿಯನ್ ಅಂದರೆ ರೂ. 612 ಕೋಟಿ ಇದೆ. ಇದರ ಹೊರತಾಗಿ ಅವರು $55-60 ಮಿಲಿಯನ್ ಅಂದರೆ ಸುಮಾರು ರೂ. 450 ಕೋಟಿಯನ್ನು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಮೂಲಕ ಗಳಿಸುತ್ತಾರೆ.

1 / 5
ಕತಾರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಅರ್ಜೆಂಟೀನಾ ಎಂಟು ವರ್ಷಗಳ ನಂತರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ 6ನೇ ಬಾರಿಗೆ ಫಿಪಾ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಕತಾರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಅರ್ಜೆಂಟೀನಾ ಎಂಟು ವರ್ಷಗಳ ನಂತರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ 6ನೇ ಬಾರಿಗೆ ಫಿಪಾ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

2 / 5

ತನ್ನ ಮಾಂತ್ರಿಕ ಪ್ರದರ್ಶನದಿಂದ ಅರ್ಜೆಂಟೀನಾ ತಂಡವನ್ನು ಫೈನಲ್​ಗೆ ಕರೆದೊಯ್ದಿರುವ ಫುಟ್ಬಾಲ್ ದೈತ್ಯ ಲಿಯೋನೆಲ್ ಮೆಸ್ಸಿ ಭಾನುವಾರ ತನ್ನ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡುವುದಾಗಿ ಹೇಳಿಕೊಂಡಿದ್ದಾರೆ. ಅರ್ಜೆಂಟೀನಾ ಪರ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಇದುವರೆಗೆ ಐದು ಗೋಲುಗಳನ್ನು ಗಳಿಸಿರುವ ಮೆಸ್ಸಿ ಇದರೊಂದಿಗೆ ಗೋಲ್ಡನ್ ಪ್ರಶಸ್ತಿ ರೇಸ್​ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಹೀಗೆ ತನ್ನ ಅದ್ಭುತ ಪ್ರದರ್ಶನದ ಮೂಲಕ ಫುಟ್ಬಾಲ್​ನಲ್ಲಿ ದೈತ್ಯ ಪ್ರತಿಭೆಯಾಗಿರುವ ಮೆಸ್ಸಿ, ವೈಯಕ್ತಿಕ ಬದುಕಿನಲ್ಲಿ ನಡೆಸುತ್ತಿರುವ ಐಷರಾಮಿ ಬದುಕಿನ ಬಗ್ಗೆ ಕೇಳಿದರೆ ನೀವು ಕೂಡ ಅಚ್ಚರಿಪಡುವುದು ಖಚಿತ.

3 / 5

ಆಟದಲ್ಲಿ ಟಾಪ್ ಕ್ಲಾಸ್ ಆಗಿರುವ ಮೆಸ್ಸಿ, ಗಳಿಕೆಯ ವಿಷಯದಲ್ಲೂ ಇತರ ಕ್ರೀಡಾ ಸ್ಪರ್ಧಿಗಳನ್ನು ಮೀರಿಸಿದ್ದಾರೆ. ಇನ್ಸೈಡರ್ ಪ್ರಕಾರ, ಮೆಸ್ಸಿ ಒಟ್ಟು ಗಳಿಕೆ 600 ಮಿಲಿಯನ್ ಡಾಲರ್ ಅಂದರೆ 4830 ಕೋಟಿ ರೂಪಾಯಿಗಳು.

4 / 5

ಕೇವಲ ಫುಟ್‌ಬಾಲ್‌ನಿಂದಲೇ ಮೆಸ್ಸಿಯ ಒಟ್ಟು ಗಳಿಕೆಯು $75 ಮಿಲಿಯನ್ ಅಂದರೆ ರೂ. 612 ಕೋಟಿ ಇದೆ. ಇದರ ಹೊರತಾಗಿ ಅವರು $55-60 ಮಿಲಿಯನ್ ಅಂದರೆ ಸುಮಾರು ರೂ. 450 ಕೋಟಿಯನ್ನು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಮೂಲಕ ಗಳಿಸುತ್ತಾರೆ.

5 / 5

ಮೆಸ್ಸಿ ಬಾರ್ಸಿಲೋನಾದ ಕಡಲತೀರದಲ್ಲಿ 519 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಹೊಂದಿದ್ದು, ಇದು ಖಾಸಗಿ ಫುಟ್ಬಾಲ್ ಮೈದಾನವನ್ನೂ ಹೊಂದಿದೆ. ನೋ ಫ್ಲೈ ಜೋನ್‌ನಲ್ಲಿ ನಿರ್ಮಿಸಲಾದ ಈ ಬಂಗಲೆಯ ಹೊರತಾಗಿ, ಮೆಸ್ಸಿ 77 ಹಾಸಿಗೆಗಳ ಹೋಟೆಲ್ ಅನ್ನು ಸಹ ಹೊಂದಿದ್ದಾರೆ. MiM Stiges ಹೆಸರಿನ ಈ ಹೋಟೆಲ್‌ನಲ್ಲಿ ಒಂದು ರಾತ್ರಿಯ ಬಾಡಿಗೆ 105 ಪೌಂಡ್‌ಗಳವರೆಗೆ ಇರುತ್ತದೆ. ಮನೆ ಮತ್ತು ಹೋಟೆಲ್ ಹೊರತುಪಡಿಸಿ, ಮೆಸ್ಸಿ 100 ಕೋಟಿ ರೂಪಾಯಿ ಮೌಲ್ಯದ ಸ್ವಂತ ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ.

Published On - 5:40 pm, Wed, 14 December 22

Loading...
Unable to load recommendations.
Follow Us