ಕೇವಲ 1,947 ರೂಗೆ ಫ್ರೈಟ್ ಟಿಕೆಟ್; ಏರ್ ಇಂಡಿಯಾ ಎಕ್ಸ್​ಪ್ರೆಸ್ ಫ್ರೀಡಂ ಸೇಲ್; ಟಾಟಾ ಗ್ರೂಪ್​ನಿಂದ ಸ್ವಾತಂತ್ರ್ಯೋತ್ಸವ ಕೊಡುಗೆ

|

Updated on: Aug 02, 2024 | 1:16 PM

ನವದೆಹಲಿ, ಆಗಸ್ಟ್ 2: ಬಸ್ಸಿಗಿಂತಲೂ ಕಡಿಮೆ ಬೆಲೆಗೆ ವಿಮಾನದಲ್ಲಿ ಪ್ರಯಾಣಿಸಬಹುದು. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆ ಇಂಥದ್ದೊಂದು ಅಪೂರ್ವ ಅವಕಾಶ ಕಲ್ಪಿಸಿದೆ. ಬೆಂಗಳೂರಿನಿಂದ ಚೆನ್ನೈಗೆ 2,000 ರೂ ಒಳಗೆ ನೀವು ಪ್ರಯಾಣಿಸಬಹುದು. ಫ್ರೀಡಂ ಸೇಲ್ ಆಫರ್​ನಲ್ಲಿ ಇದು ಸಾಧ್ಯ. ಇಲ್ಲಿದೆ ಹೆಚ್ಚಿನ ವಿವರ...

1 / 6
ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಆಫರ್ ಕೊಟ್ಟಿದೆ. ಫ್ರೀಡಂ ಸೇಲ್ ಯೋಜನೆಯನ್ನು ಆರಂಭಿಸಲಾಗಿದ್ದು, ಎರಡು ಸಾವಿರ ರೂ ಒಳಗೆ ಟಿಕೆಟ್ ದರ ಆರಂಭವಾಗುತ್ತದೆ.

2 / 6
ಇದು ಸೀಮಿತ ಅವಧಿಯವರೆಗೆ ಇರುವ ಆಫರ್ ಆಗಿದೆ. ಅಗ್ಗದ ಟಿಕೆಟ್ ದರ ಅಷ್ಟೇ ಅಲ್ಲ, ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಬುಕ್ ಮಾಡಬಹುದು. ಬಹಳ ಅಗ್ಗದ ಬೆಲೆಯಲ್ಲಿ ಚೆಕ್ ಇನ್ ಬ್ಯಾಗೇಜ್​ಗೆ ಶುಲ್ಕ ಇರುತ್ತದೆ. ಇವೆಲ್ಲವೂ ಕೂಡ ಫ್ರೀಡಂ ಸೇಲ್​ನ ಭಾಗವಾಗಿ ಬರುವ ಪ್ಯಾಕೇಜ್ ಆಗಿದೆ.

3 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 47 ಮಾರ್ಗಗಳಿಗೆ ಈ ಸ್ಪೆಷಲ್ ಆಫರ್ ಮಾಡಲಾಗಿದೆ. ಬೆಂಗಳೂರು-ಗೋವಾ, ದೆಹಲಿ-ಗ್ವಾಲಿಯರ್, ದೆಹಲಿ-ಜೈಪುರ್, ಬೆಂಗಳೂರು-ಚೆನ್ನೈ ಮೊದಲಾದ ಮಾರ್ಗಗಳು ಇದರಲ್ಲಿ ಇವೆ. 15 ಅಂತಾರಾಷ್ಟ್ರೀಯ ಮಾರ್ಗಗಳೂ ಈ ಆಫರ್​ನಲ್ಲಿವೆ.

4 / 6
ಆಗಸ್ಟ್ 5ನಷ್ಟರಲ್ಲಿ ನೀವು ಫ್ಲೈಟ್ ಬುಕ್ ಮಾಡಬೇಕು. ಸೆಪ್ಟೆಂಬರ್ 30ರವರೆಗೆ ನಿಮ್ಮ ಪ್ರಯಾಣ ದಿನ ಇರಬೇಕು. ಆಗಸ್ಟ್ 5ರ ಬಳಿಕ ಫ್ರೀಡಂ ಸೇಲ್ ಆಫರ್ ಮುಗಿದುಹೋಗುತ್ತದೆ.

5 / 6
ಮೇಕ್ ಮೈ ಟ್ರಿಪ್ ಇತ್ಯಾದಿ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಸಿಕ್ಕೋದಿಲ್ಲ. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದು.

6 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವೆಬ್​ಸೈಟ್ ವಿಳಾಸ ಇದು: www.airindiaexpress.com ಇಲ್ಲಿ ಮೇಲೆ ಮೆನುವಿನಲ್ಲಿ ಡೀಲ್ಸ್ ಕ್ಲಿಕ್ ಮಾಡಿದರೆ ಫ್ರೀಡಂ ಸೇಲ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನೀವು ಫ್ಲೈಟ್ ಬುಕ್ ಮಾಡಬಹುದು.