Updated on: Aug 02, 2024 | 12:01 PM
ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಇಂದು (ಆಗಸ್ಟ್ 2) ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ.
ದುನಿಯಾ ವಿಜಯ್ ತುಮಕೂರಿಗೆ ಆಗಮಿಸಿದ ವೇಳೆ ಅಭಿಮಾನಿಗಳು ಹೂವು ಸುರಿದು ಸ್ವಾಗತ ಮಾಡಿದ್ದಾರೆ. ತುಮಕೂರು-ಬೆಂಗಳೂರು ರಸ್ತೆಯಲ್ಲಿ ಅಭಿಮಾನಿಗಳು ಹೂ ಸುರಿದಿದ್ದಾರೆ.
ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿದ ನಟ ದುನಿಯಾ ವಿಜಯ್, ಗದ್ದುಗೆಗೆ ನಮಸ್ಕರಿಸಿದ ಬಳಿಕ ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಕೆಲ ಹೊತ್ತು ಮಾತನಾಡಿದರು.
‘ಭೀಮ’ ಸಿನಿಮಾ ನೀಡುತ್ತಿರುವ ಸಂದೇಶವನ್ನು ಶ್ರೀಗಳಿಗೆ ದುನಿಯಾ ವಿಜಯ್ ವಿವರಿಸಿದರು. ಈ ಸಿನಿಮಾ ಸಾಮಾಜಿಕ ಕಾಳಜಿ ಇರೋ ಸಿನ್ಮಾ ಪ್ರತಿಯೊಬ್ಬರು ನೋಡಲೇ ಬೇಕೆಂದು ಶ್ರೀಗಳು ಹೇಳಿದರು.
ಆ ಬಳಿಕ ತಮಕೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಭಾಗಿಯಾದರು. ವಿದ್ಯಾರ್ಥಿಗಳಿಗೆ ಭೀಮ ಚಿತ್ರದ ಕುರಿತು ದುನಿಯಾ ವಿಜಯ್ ವಿವರಿಸಿದರು.
ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ‘ಭೀಮ’. ಈ ಮೊದಲು ‘ಸಲಗ’ ಸಿನಿಮಾವನ್ನು ದುನಿಯಾ ವಿಜಯ್ ನಿರ್ದೇಶನ ಮಾಡಿದ್ದರು.
‘ಭೀಮ’ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಕೆಲ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿವೆ.