ತೆಲುಗಿನ ಜನಪದ, ಸಿನಿಮಾ ಗಾಯಕಿ ಮಂಗ್ಲಿಗೆ ಕರ್ನಾಟಕದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಕನ್ನಡದ 'ಕಣ್ಣು ಹೊಡೆಯಾಕ' ಹಾಡಿನಿಂದ ರಾತ್ರೋ ರಾತ್ರಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು ಮಂಗ್ಲಿ.
ಆ ಹಾಡಿನ ಬಳಿಕ ಕೆಲವಾರು ಹಾಡುಗಳನ್ನು ಕನ್ನಡದಲ್ಲಿ ಮಂಗ್ಲಿ ಹಾಡಿದ್ದಾರೆ.
ಮಂಗ್ಲಿ ಕನ್ನಡದ ಒಂದು ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಲಿದ್ದಾರೆ ಎನ್ನಲಾಗಿತ್ತು.
ಮಂಗ್ಲಿ ತೆಲುಗಿನ ಬಹುಜನಪ್ರಿಯ ಜನಪದ ಹಾಡುಗಾರ್ತಿ ಜೊತೆಗೆ ಹಲವಾರು ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.
ಟಿವಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಮಂಗ್ಲಿ, ತೆಲಂಗಾಣ ಮಣ್ಣಿನ ಹಾಡುಗಳನ್ನು ಹಾಡುತ್ತಾ ಖ್ಯಾತಿ ಗಳಿಸಿದರು.
ಬಡತನದ ಕುಟುಂಬದಿಂದ ಬಂದ ಮಂಗ್ಲಿ ಏರಿರುತ್ತಿರುವ ಎತ್ತರ, ಗಳಿಸಿರುವ ಜನಪ್ರಿಯತೆ ಸಾಮಾನ್ಯ ಸಾಧನೆಯಲ್ಲ.