
‘ಬಿಗ್ ಬಾಸ್ ಒಟಿಟಿ’ ಆರಂಭಕ್ಕೆ ಸಿದ್ಧತೆ ನಡೆದಿದೆ. ಯಾವೆಲ್ಲ ಸೆಲೆಬ್ರಿಟಿಗಳು ಈ ಬಾರಿ ದೊಡ್ಮನೆ ಸೇರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಸಲ್ಮಾನ್ ಖಾನ್ ನೇತೃತ್ವದಲ್ಲಿ ಈ ಬಾರಿಯ ಒಟಿಟಿ ಶೋ ನಡೆಯಲಿದೆ.

‘ಬಿಗ್ ಬಾಸ್ ಹಿಂದಿ ಒಟಿಟಿ’ ಎರಡನೇ ಸೀಸನ್ಗೆ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಇದನ್ನು ಕೇಳೀ ಅನೇಕರು ಅಚ್ಚರಿಗೊಂಡಿದ್ದಾರೆ.

ಮಿಯಾ ಖಲೀಫಾ ಅವರು ಬ್ಲ್ಯೂ ಸಿನಿಮಾಗಳ ಮೂಲಕ ಫೇಮಸ್ ಆದವರು. ಆದರೆ, ಈಗ ಅವರು ಆ ಇಂಡಸ್ಟ್ರಿ ತೊರೆದಿದ್ದಾರೆ. ಈಗ ಅವರು ‘ಬಿಗ್ ಬಾಸ್’ಗೆ ಬರಲಿದ್ದಾರೆ ಎಂಬ ಸುದ್ದಿ ಸೆನ್ಸೇಷನ್ ಸೃಷ್ಟಿಸಿದೆ.

ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪ ಹೊತ್ತಿರುವ ರಾಜ್ ಕುಂದ್ರಾ ಅವರಿಗೂ ಆಹ್ವಾನ ಹೋಗಿದೆ. ಆದರೆ, ಅವರು ಈ ಬಗ್ಗೆ ಯಾವುದೇ ಖಚಿತತೆ ನೀಡಿಲ್ಲ ಎನ್ನಲಾಗುತ್ತಿದೆ.

ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ‘ಬಿಗ್ ಬಾಸ್ ಹಿಂದಿ’ ಐದನೇ ಸೀಸನ್ಗೆ ಆಗಮಿಸಿದ್ದರು. ಅವರು ಈ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.