ದೇಶದಲ್ಲಿ ಅಶಾಂತಿ ಸೃಷ್ಟಿಯಾದಾಗ ದೇಶ ಬಿಟ್ಟು ಪಲಾಯನ ಮಾಡಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮೊದಲಿಗರಲ್ಲ, ಇನ್ನೂ ಹಲವು ದೇಶಗಳ ಪ್ರಮುಖರು ದೇಶ ಬಿಟ್ಟು ಓಡಿ ಹೋಗಿದ್ದರು. ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನದ ನಾಯಕರು ಕೂಡ ದೇಶ ಬಿಟ್ಟು ಓಡಿ ಹೋಗಿದ್ದರು.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭಗೊಂಡಿದ್ದು, 150ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಭಾರತಕ್ಕೆ ಆಗಮಿಸಿದ್ದಾರೆ.
ಬಾಂಗ್ಲಾದೇಶದ ಪ್ರತಿಭಟನೆಗೆ ಕಾರಣಗಳಿವು: ಬಾಂಗ್ಲಾದೇಶದ ನ್ಯಾಯಾಲಯವು ಬಾಂಗ್ಲಾದೇಶ ವಿಮೋಚನೆ ಸಂದರ್ಭದಲ್ಲಿ ಹೋರಾಡಿದವರ ವಶಂಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ನೀಡಿದ್ದ ತೀರ್ಪು ಪ್ರತಿಭಟನೆಗೆ ಕಾರಣವಾಯಿತು.
ಇತ್ತೀಚಿನ ದಿನಗಳ ಉಂಟಾದ ಆರ್ಥಿಕ ಕುಸಿತ, ಉದ್ಯೋಗಾವಕಾಶಗಳ ಕೊರತೆ, ಕೋವಿಡ್ ಸೋಂಕಿನ ನಂತರ ಉದ್ಭವವಾಗಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಯುವಕರು ಸಿಟ್ಟಿಗೆದ್ದಿದ್ದರು. ನ್ಯಾಯಾಲಯದ ತೀರ್ಪಿನಿಂದ ಅವರ ಬುದ್ಧಿಯನ್ನು ಕೋಪದ ಕೈಗೆ ಕೊಟ್ಟಿದ್ದರು.
ಶ್ರೀಲಂಕಾ: ಶ್ರೀಲಂಕಾದಲ್ಲಿ 2022ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ತೈಲದಂತಹ ಮೂಲಭೂತ ವಸ್ತುಗಳ ಆಮದಿಗಾಗಿ ಹಣ ಪಾವತಿಸಲು ಕೂಡ ಶ್ರೀಲಂಕಾ ಸರ್ಕಾರಕ್ಕೆ ಕಷ್ಟವಾಯಿತು. ದಿನನಿತ್ಯದ ಸರಕುಗಳು ಮತ್ತು ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿದವು, ದೀರ್ಘಕಾಲದವರೆಗೆ ವಿದ್ಯುತ್ ಕಡಿತಗೊಂಡಿತು. ಅಂದು ದಶಕಗಳಿಂದ ಉತ್ತಮ ಆಡಳಿತ ನಡೆಸಿಕೊಂಡು ಬಂದಿರುವ ಅಧ್ಯಕ್ಷ ಗೊಟಬಯ ರಾಜಪಕ್ಸೆ ಹಾಗೂ ಪ್ರಧಾನಿ ಮಹಿಂದಾ ರಾಜಪಕ್ಷೆ ರಾಜೀನಾಮೆಗೆ ಒತ್ತಾಯ ಕೇಳಿಬಂದಿತ್ತು. ಆಗ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದಾಗ ಅವರು ಮಾಲ್ಡೀವ್ಸ್ಗೆ ಪಲಾಯನ ಮಾಡಿದರು ಸ್ವಲ್ಪ ಸಮಯದ ಬಳಿಕ ರಾಜೀನಾಮೆ ಸಲ್ಲಿಸಿದ್ದರು. ಸ್ವಲ್ಪ ದಿನಗಳ ಕಾಲ ಥೈಲೆಂಡ್ನಲ್ಲಿದ್ದರು.
ಶ್ರೀಲಂಕಾ: ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು 2022ರಲ್ಲಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು. ಅಂತಿಮವಾಗಿ ಶ್ರೀಲಂಕಾ ಸಂಸತ್ತಿನಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಈ ವರ್ಷದ ಸೆಪ್ಟೆಂಬರ್ನಲ್ಲಿ ಚುನಾವಣೆ ನಡೆಯಲಿದೆ.
ಅಫ್ಘಾನಿಸ್ತಾನ: 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಆರ್ಮಿ ಮತ್ತು ನ್ಯಾಟೋ ಪಡೆಗಳು ಎರಡು ದಶಕಗಳ ನಂತರ ತಮ್ಮ ಸೇನೆಯನ್ನು ಹಿಂತೆಗೆದುಕೊಂಡವು. ತಾಲಿಬಾನ್ ಇದನ್ನು ವಶಪಡಿಸಿಕೊಂಡಿತು. ಆಗಸ್ಟ್ 15ರಂದು ಭಾರತವು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದರೆ, ತಾಲಿಬಾನ್ ಅಫ್ಘಾನಿಸ್ತಾನದ ಕಾಬೂಲ್ ಅನ್ನು ಸುತ್ತುವರೆದಿತ್ತು. ಅಮೆರಿಕ ಅಲ್ಲಿ 2 ದಶಕಗಳ ಕಾಲ ಇದ್ದು, ಸರ್ಕಾರ ರಚಿಸಿತು, ಸೇನೆಗೆ ತರಬೇತಿ ನೀಡಿತು, ಆದರೆ ತಾಲಿಬಾನ್ ಕೂಡ ಬಲಗೊಳ್ಳುತ್ತಲೇ ಇತ್ತು. ಆಗ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆತಿದ್ದರು.
ಅಫ್ಘಾನಿಸ್ತಾನ: ನಾನು ಅಲ್ಲೇ ಉಳಿಯುತ್ತಿದ್ದರೆ ದೇಶದಲ್ಲಿ ದೊಡ್ಡ ಮಟ್ಟದ ರಕ್ತಪಾತ ನಡೆಯುತ್ತಿತ್ತು. ಇದನ್ನು ತಪ್ಪಿಸಲು ನಾನು ಅಲ್ಲಿಂದ ಹೊರಡಬೇಕಾಯಿತು. ಇಂತಹ ಅವಘಡ ತಪ್ಪಿಸುವ ಉದ್ದೇಶದಿಂದ ಬಂದಿದ್ದೇ ಹೊರತು ಪರಾರಿಯಾಗಿಲ್ಲ ಎಂದು ಘನಿ ಹೇಳಿದ್ದರು.