ಹುಬ್ಬಳ್ಳಿಯಲ್ಲಿ 121 ಕೆಜಿಯ ಬೆಳ್ಳಿ ಗಣೇಶ ಪ್ರತಿಷ್ಠಾಪನೆ, ಫೋಟೋಸ್​​ ನೋಡಿ

ಹುಬ್ಬಳ್ಳಿ ಗಣೇಶೋತ್ಸವ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೂಡಿಸುವ ಗಣಪನನ್ನು ನೋಡಲು ಹೊರ ಜಿಲ್ಲೆಗಳಿಂದ ಕೂಡ ಆಗಮಿಸುತ್ತಾರೆ. ಹುಬ್ಬಳ್ಳಿಯಲ್ಲಿ ಮೂರು ಕಡೆ ಬೆಳ್ಳಿ ಗಣೇಶ ವಿಗ್ರಹಗಳನ್ನು ಕೂಡಿಸಲಾಗುತ್ತದೆ. ಫೋಟೋಸ್​ ನೋಡಿ.

ವಿವೇಕ ಬಿರಾದಾರ
|

Updated on: Sep 11, 2024 | 6:00 AM

Ganesh Chaturthi 2024: 121 KG Silver Ganesha Pratishtapane in Hubblli, Kannada News

ಹುಬ್ಬಳ್ಳಿ ಗಣೇಶೋತ್ಸವ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೂಡಿಸುವ ಗಣಪನನ್ನು ಮತ್ತು ಗಣಪತಿ ಪೆಂಡಲ್​ಗಳಲ್ಲಿ ಪ್ರದರ್ಶಿಸುವ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ನೋಡಲು ಹೊರ ಜಿಲ್ಲೆಗಳಿಂದ ಕೂಡ ಆಗಮಿಸುತ್ತಾರೆ.

1 / 5
Ganesh Chaturthi 2024: 121 KG Silver Ganesha Pratishtapane in Hubblli, Kannada News

ಹುಬ್ಬಳ್ಳಿಯ ಗಣೇಶೋತ್ಸವದಲ್ಲಿ ವಿಶೇಷವಾಗಿ ಮೂರು ಕಡೆ ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಹುಬ್ಬಳ್ಳಿಯ ಹೃದಯ ಭಾಗವಾಗಿರುವ ಸರಾಫಗಟ್ಟಿ, ಶೀಲವಂತರ ಓಣಿ, ಶಿಂಪಿಗಲ್ಲಿಯಲ್ಲಿ ಬೆಳ್ಳಿ ಗಣಪನನ್ನು ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ಗಣಪತಿಗಳ ಫೋಟೋಸ್​ ಇಲ್ಲಿವೆ.

2 / 5
Ganesh Chaturthi 2024: 121 KG Silver Ganesha Pratishtapane in Hubblli, Kannada News

ಹುಬ್ಬಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಗಣೇಶೋತ್ಸವ ಆರಂಭವಾಗಿದ್ದು ಸರಾಫಗಟ್ಟಿಯಲ್ಲಿ. ಕಳೆದ 65 ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇಲ್ಲಿ ಕಳೆದ 14 ವರ್ಷಗಳಿಂದ ಬೆಳ್ಳಿ ಗಣೇಶನನ್ನು ಸ್ಥಾಪಿಸಲಾಗುತ್ತಿದೆ. ಮೂಷಿಕ ಸೇರಿ 121 ಕೆಜಿ ಬೆಳ್ಳಿ ಗಣಪತಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ರಂಗಕರ್ಮಿಗಳಿಂದ ನಾಟಕವನ್ನು ಆಯೋಜನೆ ಮಾಡಲಾಗಿದೆ.

3 / 5
Ganesh Chaturthi 2024: 121 KG Silver Ganesha Pratishtapane in Hubblli, Kannada News

ಶ್ರೀ ವರಸಿದ್ದಿ ವಿನಾಯಕ ಮಂಡಳಿಯಿಂದ ಶೀಲವಂತರ ಓಣಿಯಲ್ಲಿ ಕಳೆದ 44 ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. ಕಳೆದ 24 ವರ್ಷಗಳಿಂದ ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಪ್ರಭಾವಳಿ ಸೇರಿದಂತೆ ಒಟ್ಟು 50 ಕೆಜಿಯ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಗಣೇಶನಿಗೆ 1.25ಕೆಜಿಯ ಬಂಗಾರದ ಆರಭರಣಗಳಿಂದ ಅಲಂಕಾರ ಮಾಡಲಾಗಿದೆ. ಶ್ರೀ ವರಸಿದ್ದಿ ವಿನಾಯಕ ಮಂಡಳಿವತಿಯಿಂದ ಸಾಮಾಜಿಕ ಚಟುವಟಿಕೆಗಳು ಕೂಡ ನಡೆಯುತ್ತವೆ. ಈ ಬಾರಿ ಇಲ್ಲಿ ಶ್ರೀ ಸಿದ್ದಾರೂಢರ ಬಾಲ ಲೀಲೆಯನ್ನು ಪ್ರದರ್ಶಿಸಲಾಗುತ್ತಿದೆ.

4 / 5
Ganesh Chaturthi 2024: 121 KG Silver Ganesha Pratishtapane in Hubblli, Kannada News

ಶ್ರೀ ಮಾರುತಿ ಯುವಕ ಸೇವಾ ಸಂಘದಿಂದ ಶಿಂಪಿಗಲ್ಲಿಯಲ್ಲಿ ಕಳೆದ 60 ವರ್ಷದಿಂದ ಇಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕಳೆದ 18 ವರ್ಷಗಳಿಂದ ಇಲ್ಲಿ 51 ಕೆಜಿಯ ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಈ ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪ್ರದರ್ಶನ ಇರಲಿದೆ.

5 / 5
Follow us
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ