Kannada News Photo gallery Ganesh Chaturthi 2024 Do this on Vinayaka Chauthi Day - God Ganesha grace and luck will be yours
Ganesh Chaturthi 2024: ವಿನಾಯಕ ಚೌತಿ ದಿನ ಹೀಗೆ ಮಾಡಿ- ಗಣೇಶನ ಅನುಗ್ರಹ ಮತ್ತು ಅದೃಷ್ಟ ನಿಮ್ಮದಾಗುತ್ತದೆ!
Ganesh Chaturthi 2024 and God Ganesha grace: ವಿನಾಯಕ ಚೌತಿ (ಗಣೇಶನ ಹಬ್ಬ) ಮಕ್ಕಳು ಮತ್ತು ಹಿರಿಯರು ಸಂಭ್ರಮದಿಂದ ಆಚರಿಸುತ್ತಾರೆ. ಗಣೇಶನ ಜನ್ಮ ದಿನವನ್ನು ವಿನಾಯಕ ಚೌತಿ ಎಂದು ಆಚರಿಸಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಗಣೇಶನು ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆಯಿದೆ. ಈ ದಿನ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ. ಗಣೇಶ ಚತುರ್ಥಿ ದಿನದಂದು ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಮಾಡಲಾಗುತ್ತದೆ. ಇವು ಜೀವನದ ಎಲ್ಲ ಪ್ರಯತ್ನದಲ್ಲೂ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತವೆ. ನಿಮ್ಮ ತೊಂದರೆಗಳನ್ನು ನಿವಾರಿಸುತ್ತದೆ.