ಮೈಸೂರಿನ ಮಾರುಕಟ್ಟೆಯಲ್ಲಿ ವಿವಿಧ ರೂಪದ ಗಣೇಶ ಮೂರ್ತಿ; ಗಣಪತಿಯ ಚಿತ್ರಣ ಇಲ್ಲಿದೆ
TV9 Web | Updated By: preethi shettigar
Updated on:
Sep 10, 2021 | 10:13 AM
ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಯಲ್ಲಿ ವಿವಿಧ ರೂಪದ ಗಣೇಶ ಮೂರ್ತಿ ರಾರಾಜಿಸುತ್ತಿವೆ. ಕಲಾವಿದ ಯಶವಂತ ಕೈಚಳಕದಲ್ಲಿ ಮೂಡಿದೆ ವಿವಿಧ ರೂಪದ ವಿಘ್ನ ನಿವಾರಕ.
1 / 7
ಇಂದು ( ಸೆಪ್ಟೆಂಬರ್ 10, ಶುಕ್ರವಾರ) ಗಣೇಶ ಚತುರ್ಥಿಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಭಾದ್ರಪದ ಮಾಸ ಶುಕ್ಲ ಪಕ್ಷದ 4ನೇ ದಿನದಂದು ಗಣೇಶನ ಜನ್ಮದಿನ ಎಂದು ಪುರಾಣದಿಂದ ತಿಳಿದು ಬಂದಿದೆ.
2 / 7
ಮನೆ ಮನೆಗಳಲ್ಲಿ ಗಣೇಶನ ವಿಗ್ರಹ ಕೂರಿಸಿ ವಿಶೇಷ ಪೂಜೆ ಕೂಗೊಳ್ಳುವ ಮೂಲಕ ಹಿಂದೂ ಜನರು ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮುಂದಿನ ದಿನಗಳಲ್ಲಿ ಜೀವನ ತುಂಬಾ ಖುಷಿಯೇ ತುಂಬಿರಲಿ, ಸುಖ ನೆಮ್ಮದಿಯೇ ಜೀವನದಲ್ಲಿರಲಿ, ಸಂಪತ್ತು ಲಭಿಸಲಿ ಎಂದು ಗಣೇಶನನ್ನು ಈ ದಿನ ವಿಶೇಷವಾಗಿ ಆರಾಧಿಸಲಾಗುತ್ತದೆ.
3 / 7
ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಯಲ್ಲಿ ವಿವಿಧ ರೂಪದ ಗಣೇಶ ಮೂರ್ತಿ ರಾರಾಜಿಸುತ್ತಿವೆ. ಕಲಾವಿದ ಯಶವಂತ ಕೈಚಳಕದಲ್ಲಿ ಮೂಡಿದೆ ವಿವಿಧ ರೂಪದ ವಿಘ್ನ ನಿವಾರಕ.
4 / 7
ಗಣೇಶನ ವಿವಿಧ ರೂಪ ನೋಡಿ ಜನರು ಖುಷಿಯಾಗಿದ್ದಾರೆ. ಕೊರೊನಾ ಲಸಿಕೆ ಹೊತ್ತ ಗಣಪ. ದೇಹಧಾಡ್ಯ ಗಣಪ ಬೈಕ್ ಸವಾರಿ ಮಾಡುತ್ತಿರುವುದು ಹೆಚ್ಚು ಆಕರ್ಷಣಿಯವಾಗಿದೆ.
5 / 7
ಸಮಸ್ಯೆಗಳೆಲ್ಲ, ಕಷ್ಟಗಳೆಲ್ಲಾ ಬಹುಬೇಗ ಬದುಕಿನಿಂದ ದೂರವಾಗಲಿ ಎಂದು ವಿಘ್ನ ನಿವಾರಕನಲ್ಲಿ ಭಕ್ತಿಯಿಂದ ಬೇಡಿಕೊಳ್ಳುವ ದಿನವಿದು, ಈ ದಿನದಂದು 108 ದರ್ಬೆಗಳನ್ನು ಕೊಯ್ದು ಗಣೇಶನಿಗೆ ಅರ್ಪಿಸಿದರೆ ನಿಮ್ಮ ಬೇಡಿಕೆಗಳೆಲ್ಲವೂ ಪೂರೈಕೆಯಾಗುತ್ತದೆ ಎಂಬ ನಂಬಿಕೆ ಇದೆ.
6 / 7
ಮನೆಯಲ್ಲಿ ಗಣೇಶನ ಮಣ್ಣಿನ ವಿಗ್ರಹವನ್ನು ಕೂರಿಸಿ ವಿಶೇಷವಾಗಿ ಪೂಜೆ ಸಲ್ಲಿಸಿ, ಗಣಪತಿಗೆ ಇಷ್ಟವಾದ ಖಾದ್ಯಗಳನ್ನು ಮಾಡಿ ನೈವೇದ್ಯ ನೀಡಲಾಗುತ್ತದೆ. ಗಣಪತಿಗೆ ಪ್ರಿಯವಾದ ಮೋದಕ ಜತೆ ನಾನಾ ವಿಧದ ತಿನಿಸುಗಳು ಈ ದಿನದಂದು ವಿಶೇಷ.
7 / 7
ಸುದೀಪ್ ಅಭಿನಯದ ರೋಣ ಪಾತ್ರಧಾರಿ ಗಣಪ. ಹಸ್ತದಲ್ಲಿ ಮಲಗಿದ ವಿನಾಯಕ ಕೃಷ್ಣನ ಅವತಾರಿ ವೆಂಕಟೇಶ್ವರ ರೂಪದ ಗಣಪ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
Published On - 10:00 am, Fri, 10 September 21