ವೀಡಿಯೊಗಳ ವಿಷಯಕ್ಕೆ ಬಂದರೆ, ಈ ಕ್ಯಾಮೆರಾ ಪ್ರಕಾಶಮಾನವಾದ ಬೆಳಕಿನಲ್ಲಿ ಹಾಗೂ ಕಡಿಮೆ ಬೆಳಕಿನ ಸ್ಥಿತಿಯಲ್ಲಿ ಛಾಯಾಗ್ರಹಣಕ್ಕೆ ಸೂಕ್ತವಾಗಿರುತ್ತದೆ. ISOCELL HP1 ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 8K ವೀಡಿಯೋವನ್ನು ಸೆರೆಹಿಡಿಯಬಹುದು. HP1 ಸೆನ್ಸಾರ್ ರೆಸಲ್ಯೂಶನ್ ಅನ್ನು 50MP ಅಥವಾ 8,192 x 6,144p ಗೆ ಇಳಿಸಲು ಇದು ನಾಲ್ಕು ಪಿಕ್ಸೆಲ್‌ಗಳನ್ನು ಒಂದೇ ಪಿಕ್ಸೆಲ್‌ಗೆ ವಿಲೀನಗೊಳಿಸುತ್ತದೆ. ಇದರಿಂದ, ಯಾವುದೇ ಸೆನ್ಸಾರ್ ಕ್ರಾಪಿಂಗ್ ಇಲ್ಲದೆ ಸ್ಥಳೀಯ 8K ವಿಡಿಯೋಗಳನ್ನು (7,680 x 4,320p) ಚಿತ್ರೀಕರಿಸಬಹುದು. ಇದೀಗ ಇದನ್ನೂ ಮೀರಿಸುವ 576 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಪರಿಚಯಿಸುವುದಾಗಿ ಸ್ಯಾಮ್‌ಸಂಗ್ ಘೋಷಿಸಿದೆ.