
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ ಜೆನಿಲಿಯಾ ಮತ್ತು ರಿತೇಶ್ ದೇಶ್ಮುಖ್ ಅವರೊಂದಿಗೆ, ದಂಪತಿಯ ಮೊದಲ ಮಗು ರಿಯಾನ್ನನ್ನು ಕಾಣಬಹುದು

ಜೆನಿಲಿಯಾ ಡಿಸೋಜಾ ತಮ್ಮ ಮಕ್ಕಳು ಹಾಗೂ ತಾಯಿ ಜೆನಟ್ ಡಿಸೋಜಾ ಅವರೊಂದಿಗೆ ತೆಗೆಸಿಕೊಂಡ ಸುಂದರ ಚಿತ್ರ

ರಿತೇಶ್ ದೇಶ್ಮುಖ್ ಹುಟ್ಟುಹಬ್ಬದ ಸಂದರ್ಭದಲ್ಲಿ ಜೆನಿಲಿಯಾ ಹಂಚಿಕೊಂಡ ಚಿತ್ರವಿದು. ಈ ತಾರಾ ಜೋಡಿ ದಾಂಪತ್ಯಕ್ಕೆ ಕಾಲಿರಿಸಿ ದಶಕ ಕಳೆದಿದೆ.

ಜೆನಿಲಿಯಾ ಡಿಸೋಜಾ ತಮ್ಮ ಅತ್ತೆಯೊಂದಿಗೆ. ಜೊತೆಯಲ್ಲಿ ಪತಿ ರಿತೇಶ್ ದೇಶ್ಮುಖ್ ಕೂಡಾ ಇದ್ದಾರೆ. ಜೆನಿಲಿಯಾ ಅವರು ತಮ್ಮ ಅತ್ತೆ (ರಿತೇಶ್ ಅವರ ತಾಯಿ)ಯನ್ನು ಪ್ರೀತಿಯಿಂದ ‘ಆಯಿ’ ಎಂದು ಕರೆಯುತ್ತಾರಂತೆ. ಸಾಮಾಜಿಕಜಾಲತಾಣಗಳಲ್ಲಿ ಈ ಕುರಿತು ಅವರು ಹಂಚಿಕೊಳ್ಳುತ್ತಿರುತ್ತಾರೆ.

ತಮ್ಮ ಮಗ ರಾಹಿಲ್ ಜೊತೆಯಲ್ಲಿ ಜೆನಿಲಿಯಾ. ಜೆನಿಲಿಯಾ ಮತ್ತು ರಿತೇಶ್ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಪುತ್ರನ ಹೆಸರು ರಿಯಾನ್, ಎರಡನೇ ಪುತ್ರನ ಹೆಸರು ರಾಹಿಲ್

ತಮ್ಮ ತಂದೆ ನೈಲ್ ಡಿಸೋಜಾ ಅವರೊಂದಿಗೆ ಜೆನಿಲಿಯಾ. ನೈಲ್ ಡಿಸೋಜಾ ಅವರು ಟಾಟಾ ಕಂಪನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಮ್ಮ ಸಹೋದರ ನಿಗೆಲ್ ಡಿಸೋಜಾ ಅವರೊಂದಿಗೆ ಜೆನಿಲಿಯಾ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನಿಗೆಲ್ ಕೆಲಸ ಮಾಡುತ್ತಿದ್ದಾರೆ.

ತಮ್ಮ ತಾಯಿಯವರೊಂದಿಗೆ ಜೆನಿಲಿಯಾ

ತಮ್ಮ ಅತ್ತೆ ವೈಶಾಲಿ ದೇಶ್ಮುಖ್ ಮತ್ತು ಇಬ್ಬರು ಮಕ್ಕಳೊಂದಿಗೆ ಜೆನಿಲಿಯಾ ಡಿಸೋಜಾ

ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾ ಡಿಸೋಜಾ
Published On - 12:04 pm, Thu, 5 August 21