‘ಡೆವಿಲ್’ ಟ್ರೇಲರ್​ನಲ್ಲಿ ಗಿಲ್ಲಿ ಪಾತ್ರದ ಝಲಕ್; ಸಖತ್ ಮಾಸ್

Updated on: Dec 05, 2025 | 11:37 AM

‘ಡೆವಿಲ್’ ಸಿನಿಮಾದ ಟ್ರೇಲರ್ ಇಂದು (ಡಿಸೆಂಬರ್ 5) ಬೆಳಿಗ್ಗೆ 10.05ಕ್ಕೆ ರಿಲೀಸ್ ಆಗಿದೆ. ಈ ಟ್ರೇಲರ್ ನೋಡಿದ ಫ್ಯಾನ್ಸ್ ಸಂತಸದಿಂದ ಕುಣಿದು ಕುಪ್ಪಳಿಸಿದ್ದಾರೆ, ದರ್ಶನ್ ಅವರು ಮಾಸ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಗಿಲ್ಲಿ ನಟನ ಪಾತ್ರವನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

1 / 5
ಮಿಲನ ಪ್ರಕಾಶ್ ನಿರ್ದೇಶನ, ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಟ್ರೇಲರ್​ ಅಲ್ಲಿ ದರ್ಶನ್ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಗಮನ ಸಳೆಯುವ ರೀತಿಯಲ್ಲಿ ಇದೆ.

2 / 5
ಬಿಗ್ ಬಾಸ್​​ನಲ್ಲಿರೋ ಗಿಲ್ಲಿ ನಟ ಕೂಡ ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಲುಕ್​ನ ಈ ಮೊದಲು ಬಿಡುಗಡೆ ಮಾಡಲಾಗಿತ್ತು. ಈಗ ಟ್ರೇಲರ್​ನಲ್ಲಿ ಅವರ ಪಾತ್ರದ ಝಲಕ್​ನ ತೋರಿಸಲಾಗಿದೆ. ಅವರ ಗೆಟಪ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

3 / 5
ಪೊಲೀಸ್ ಅಧಿಕಾರಿ ಎದುರು ಬಂದು ಕುಳಿತುಕೊಳ್ಳುವ ಗಿಲ್ಲಿ, ‘ಎಕ್ಸ್​ಕ್ಯೂಸ್​ ಮೀ ಪಿಸಿ, ಎಸಿ ಹಾಕಮ್ಮ. ಲಾಟ್ಸ್ ಆಫ್ ಸೆಖೆ’ ಎಂದು ಡೈಲಾಗ್ ಹೊಡೆಯುತ್ತಾರೆ. ಈ ಡೈಲಾಗ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ಸಿನಿಮಾದಲ್ಲಿ ಅವರ ಪಾತ್ರ ಎಷ್ಟು ಹೊತ್ತು ಇರುತ್ತದೆ ಎಂಬ ಕುತೂಹಲ ಇದೆ.

4 / 5
‘ಡೆವಿಲ್’ ಸಿನಿಮಾದಲ್ಲಿ ದರ್ಶನ್​ಗೆ ಜೊತೆಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ಮೊದಲಾದವರಿದ್ದಾರೆ. ಶೋಭರಾಜ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡಗೂ ಚಿತ್ರದಲ್ಲಿ ಪಾತ್ರ ಸಿಕ್ಕಿದೆ. 

5 / 5
ದರ್ಶನ್ ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ತೆರೆಗೆ ಬರುತ್ತಿದೆ. ಅಭಿಮಾನಿಗಳು ಹಾಗೂ ಕುಟುಂಬದವರು ಚಿತ್ರದ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಎಲ್ಲರೂ ಪ್ಯಾನ್ ಇಂಡಿಯಾ ಹಿಂದೆ ಓಡುತ್ತಿರುವಾಗ ‘ಡೆವಿಲ್’ ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದೆ.

Published On - 10:54 am, Fri, 5 December 25