PR Sreejesh: ಹಾಕಿ ಲೆಜೆಂಡ್ ಪಿಆರ್ ಶ್ರೀಜೇಶ್ಗೆ ಮಹತ್ವದ ಹುದ್ದೆ ನೀಡಿದ ಹಾಕಿ ಇಂಡಿಯಾ
PR Sreejesh: ಒಲಿಂಪಿಕ್ಸ್ನಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ, ಲೆಜೆಂಡರಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ಗೆ ಭಾವನಾತ್ಮಕ ವಿದಾಯವನ್ನು ಹೇಳಿದ್ದರು. ಇದೀಗ ಶ್ರೀಜೇಶ್ಗೆ ಮಹತ್ವದ ಹುದ್ದೆ ನೀಡಿರುವ ಹಾಕಿ ಇಂಡಿಯಾ, ಪಿಆರ್ ಶ್ರೀಜೇಶ್ ಅವರನ್ನು ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
1 / 6
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತ ಹಾಕಿ ತಂಡದ ಗೋಡೆ ಎಂದೇ ಕರೆಯಲ್ಪಡುವ ಗೋಲ್‌ಕೀಪರ್ ಪಿಆರ್ ಶ್ರೀಜೇಶ್, ಕಂಚಿನ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಈ ಮಾಹಿತಿ ನೀಡಿದ್ದ ಅವರು, ಇದು ನನ್ನ ಕೊನೆಯ ಅಂತರರಾಷ್ಟ್ರೀಯ ಪಂದ್ಯಾವಳಿ ಎಂದಿದ್ದರು.
2 / 6
ನಿರೀಕ್ಷೆಯಂತೆ ಒಲಿಂಪಿಕ್ಸ್ನಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ, ಲೆಜೆಂಡರಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ಗೆ ಭಾವನಾತ್ಮಕ ವಿದಾಯವನ್ನು ಹೇಳಿದ್ದರು. ಇದೀಗ ಶ್ರೀಜೇಶ್ಗೆ ಮಹತ್ವದ ಹುದ್ದೆ ನೀಡಿರುವ ಹಾಕಿ ಇಂಡಿಯಾ, ಪಿಆರ್ ಶ್ರೀಜೇಶ್ ಅವರನ್ನು ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
3 / 6
ಬಹಳ ವರ್ಷಗಳಿಂದ ಭಾರತ ಹಾಕಿ ತಂಡದ ಪ್ರಮುಖ ಸದಸ್ಯರಾಗಿರುವ ಶ್ರೀಜೇಶ್, ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಅದ್ಭುತ ಪ್ರದರ್ಶನ ನೀಡಿ ಎದುರಾಳಿ ತಂಡದ ಮುಂದೆ ಗೋಡೆಯಂತೆ ನಿಂತಿದ್ದರು. ಸ್ಪೇನ್ ವಿರುದ್ಧದ ಕಂಚಿನ ಪದಕದ ಪಂದ್ಯದಲ್ಲೂ ಶ್ರೀಜೇಶ್ ಕೊನೆಯ ಕ್ವಾರ್ಟರ್‌ನಲ್ಲಿ ಅದ್ಭುತ ಸೇವ್‌ಗಳನ್ನು ಮಾಡಿ ಮುನ್ನಡೆ ಸಾಧಿಸದಂತೆ ತಡೆದರು. ಈ ಮೂಲಕ ತಂಡ ಶ್ರೀಜೇಶ್ಗೆ ಗೆಲುವಿನೊಂದಿಗೆ ಬೀಳ್ಕೊಟ್ಟಿತು.
4 / 6
ಭಾರತದ ಪರ ಒಟ್ಟು 4 ಒಲಿಂಪಿಕ್ಸ್ ಆಡಿರುವ ಶ್ರೀಜೇಶ್, ಇದರಲ್ಲಿ ಎರಡು ಒಲಿಂಪಿಕ್ ಪದಕವನ್ನು ಗೆದ್ದ ತಂಡದ ಭಾಗವಾಗಿದ್ದಾರೆ. 2004 ರಲ್ಲಿ ಜೂನಿಯರ್ ತಂಡದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೀಜೇಶ್, 2006 ರಲ್ಲಿ ಹಿರಿಯ ತಂಡವನ್ನು ಸೇರಿಕೊಂಡರು. ಆ ನಂತರ 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮತ್ತು 2018 ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.
5 / 6
ಇದಲ್ಲದೆ, ಶ್ರೀಜೇಶ್ 2018 ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತ ತಂಡ, ಭುವನೇಶ್ವರದಲ್ಲಿ ನಡೆದ 2019 ಎಫ್‌ಐಹೆಚ್ ಪುರುಷರ ಸರಣಿ ಫೈನಲ್‌ನಲ್ಲಿ ಚಿನ್ನದ ಪದಕ ವಿಜೇತ ತಂಡ ಮತ್ತು ಬರ್ಮಿಂಗ್ಹ್ಯಾಮ್ 2022 ಕಾಮನ್‌ವೆಲ್ತ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ತಂಡದಲ್ಲಿ ಸದಸ್ಯರಾಗಿದ್ದರು.
6 / 6
ಪಿಆರ್ ಶ್ರೀಜೇಶ್ ಅವರಿಗೆ 2021 ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೆ, ಅವರು 2021 ರಲ್ಲಿ ವರ್ಷದ ವರ್ಲ್ಡ್ ಗೇಮ್ಸ್ ಅಥ್ಲೀಟ್ ಪ್ರಶಸ್ತಿಯನ್ನು ಸಹ ಪಡೆದರು. ಈ ಮೂಲಕ ವರ್ಲ್ಡ್ ಗೇಮ್ಸ್ ಅಥ್ಲೀಟ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಇದಲ್ಲದೆ 2021 ಮತ್ತು 2022 ರಲ್ಲಿ FIH ವರ್ಷದ ಗೋಲ್‌ಕೀಪರ್ ಆಗಿಯೂ ಆಯ್ಕೆಯಾಗಿದ್ದಾರೆ.