ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಿತ್ತು. ಇದರಲ್ಲಿ ಟಿ20 ಸರಣಿಯಲ್ಲಿ ಗೆದ್ದುಬೀಗಿದ್ದ ಟೀಂ ಇಂಡಿಯಾ, ಏಕದಿನ ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಗಿತ್ತು. ಇದಕ್ಕೆ ಪ್ರಮುಖ ಕಾರಣ ತಂಡದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನ ಎನ್ನಲಾಗುತ್ತಿದೆಯಾದರೂ, ಪ್ರಮುಖ ಬೌಲರ್ಗಳ ಅಲಭ್ಯತೆಯೂ ಒಂದು ಕಾರಣವಾಗಿತ್ತು.