Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಏಕದಿನ ಸರಣಿ ಸೋತು 45 ವರ್ಷಗಳ ನಂತರ ಬೇಡದ ದಾಖಲೆ ಬರೆದ ಟೀಂ ಇಂಡಿಯಾ

IND vs SL: ವಾಸ್ತವವಾಗಿ 2024 ರಲ್ಲಿ ಭಾರತದ ಮೊದಲ ಏಕದಿನ ಸರಣಿ ಇದಾಗಿತ್ತು. ಇದರ ಜೊತೆಗೆ ಈ ವರ್ಷದ ಕೊನೆಯ ಏಕದಿನ ಸರಣಿ ಕೂಡ ಇದೇ. ಈ ಸರಣಿಯನ್ನು ಹೊರತುಪಡಿಸಿ ಭಾರತ ಈ ವರ್ಷ ಇನ್ನ್ಯಾವುದೇ ಏಕದಿನ ಪಂದ್ಯವನ್ನು ಆಡುವುದಿಲ್ಲ. ಇದರರ್ಥ ಟೀಂ ಇಂಡಿಯಾ ಈ ವರ್ಷ ಆಡಿದ ಏಕೈಕ ಸರಣಿಯನ್ನು ಸೋತಿದೆ.

ಪೃಥ್ವಿಶಂಕರ
|

Updated on: Aug 09, 2024 | 10:41 PM

ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸ ಸೋಲಿನೊಂದಿಗೆ ಅಂತ್ಯಗೊಂಡಿದೆ. ಉಭಯ ತಂಡಗಳ ನಡುವೆ ನಡೆದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದಿಂದ ಸೋಲನುಭವಿಸಿತ್ತು. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸರಣಿಯ ಕೊನೆಯ ಪಂದ್ಯ ನಡೆದಿದ್ದು, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 110 ರನ್‌ಗಳಿಂದ ಸೋತಿತ್ತು.

1 / 6
ಇದರೊಂದಿಗೆ ಟೀಂ ಇಂಡಿಯಾದ 45 ವರ್ಷಗಳ ಸುದೀರ್ಘ ಗೆಲುವಿನ ಸರಣಿಗೆ ಬ್ರೇಕ್ ಬಿದ್ದಿದೆ. ಇದರ ಜೊತೆಗೆ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಜೋಡಿಯು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲನ್ನು ಎದುರಿಸಿದ ಭಾರತದ ಮೂರನೇ ನಾಯಕ ಮತ್ತು ಕೋಚ್‌ ಜೋಡಿ ಎನಿಸಿಕೊಂಡಿದೆ.

2 / 6
ವಾಸ್ತವವಾಗಿ 2024 ರಲ್ಲಿ ಭಾರತದ ಮೊದಲ ಏಕದಿನ ಸರಣಿ ಇದಾಗಿತ್ತು. ಇದರ ಜೊತೆಗೆ ಈ ವರ್ಷದ ಕೊನೆಯ ಏಕದಿನ ಸರಣಿ ಕೂಡ ಇದೇ. ಈ ಸರಣಿಯನ್ನು ಹೊರತುಪಡಿಸಿ ಭಾರತ ಈ ವರ್ಷ ಇನ್ನ್ಯಾವುದೇ ಏಕದಿನ ಪಂದ್ಯವನ್ನು ಆಡುವುದಿಲ್ಲ. ಇದರರ್ಥ ಟೀಂ ಇಂಡಿಯಾ ಈ ವರ್ಷ ಆಡಿದ ಏಕೈಕ ಸರಣಿಯನ್ನು ಸೋತಿದೆ.

3 / 6
ಈ ಮೂಲಕ 1979 ರ ನಂತರ ಟೀಂ ಇಂಡಿಯಾಕ್ಕೆ ವರ್ಷದಲ್ಲಿ ಒಂದೇ ಒಂದು ಏಕದಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಹಿಂದೆ 1979ರಲ್ಲೂ ಟೀಂ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನಾಡಿತ್ತು. ಆಡಿದ್ದ ಆ ಎಲ್ಲಾ ಮೂರು ಪಂದ್ಯಗಳನ್ನು ಭಾರತ ಸೋತಿತ್ತು.

4 / 6
ಇದಲ್ಲದೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತ ಭಾರತೀಯ ನಾಯಕರ ಪಟ್ಟಿಗೆ ಇದೀಗ ರೋಹಿತ್ ಶರ್ಮಾ ಸೇರ್ಪಡೆಯಾಗಿದ್ದಾರೆ. ರೋಹಿತ್‌ಗಿಂತ ಮೊದಲು ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ ತೆಂಡೂಲ್ಕರ್ ಹೆಸರು ಮಾತ್ರ ಈ ಪಟ್ಟಿಯಲ್ಲಿ ಸೇರಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಟೀಂ ಇಂಡಿಯಾ 1993 ರಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.

5 / 6
ಇದಾದ ಬಳಿಕ 1997ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂತಹ ಸೋಲು ಕಂಡಿತ್ತು. ಇದೀಗ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತ ಮೂರನೇ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.

6 / 6
Follow us
ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ

ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ

ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ

ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ

ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು

ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ

ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು

ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ

ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ