- Kannada News Photo gallery A Woman dies after her pet Cat Bite In Shivamogga Karnataka News In Kannada
ಶಿವಮೊಗ್ಗದಲ್ಲಿ ಸಾಕು ಬೆಕ್ಕು ಕಚ್ಚಿ ಮಹಿಳೆ ದುರಂತ ಸಾವು, ಬೆಕ್ಕು ಸಾಕುವವರೇ ಹುಷಾರ್!
ಸಾಕಿದ ಪ್ರಾಣಿಗಳಲ್ಲಿ ನಾಯಿ, ಬೆಕ್ಕು ಎಲ್ಲರಿಗೂ ಅಚ್ಚುಮೆಚ್ಚು. ಸಾಕಿದ ಪ್ರಾಣಿಗಳ ಪ್ರೀತಿಯೂ ಸಹ ಮಾಲೀಕನ ಮೇಲೆ ಅಪಾರವಾಗಿರುವ ಉದಾಹರಣಗಳಿವೆ. ಕಿಲೋಮೀಟರ್ ಗಟ್ಟಲೆ ನಾಯಿಯೊಂದು ನಡೆದುಕೊಂಡು ಹೋಗಿರುವ ಉದಾಹರಣೆ ಇವೆ. ಆದರೆ ಸಾಕಿದ ಬೆಕ್ಕು ಮನೆಯೊಡತಿಯನ್ನೇ ಬಲಿ ಪಡೆದುಕೊಂಡಿದೆ. ಅರೇ ಇದೇನಿದು ಅಚ್ಚರಿ ಅಂತೀರಾ...ಅಚ್ಚರಿಯಾದರೂ ಸತ್ಯ.
Updated on: Aug 09, 2024 | 5:23 PM

ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ದುರ್ಘಟನೆ ಸಂಭವಿಸಿದೆ. 50 ವರ್ಷ ವಯಸ್ಸಿನ ಗಂಗೀಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಮೊದಲು ತರಲಘಟ್ಟದ ಕ್ಯಾಂಪ್ನಲ್ಲಿರುವ ಯುವಕನೋರ್ವನ ಮೇಲೆ ದಾಳಿ ಮಾಡಿತ್ತು. ಬಳಿಕ ಬೆಕ್ಕು ಎರಡು ತಿಂಗಳ ಹಿಂದೆ ಮಹಿಳೆಗೆ ಕಚ್ಚಿತ್ತು. ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ಮಹಿಳೆಯು ಮೃತಪಟ್ಟಿದ್ದಾಳೆ.

ಮೊದಲು ತರಲಘಟ್ಟದ ಕ್ಯಾಂಪ್ನಲ್ಲಿರುವ ಯುವನೋರ್ವನ ಮೇಲೆ ದಾಳಿ ಮಾಡಿತ್ತು. ಬಳಿಕ ಮಹಿಳೆಯ ಮೇಲೂ ದಾಳಿ ಮಾಡಿತ್ತು. ಮಹಿಳೆ ಕಾಲಿಗೆ ಕಚ್ಚಿದ ಕಾರಣ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಹುಷಾರಾಗಿದ್ದಳು. ಈ ಕಾರಣಕ್ಕೆ ಮಹಿಳೆ ಚೇತರಿಕೆ ಕಂಡ ಹಿನ್ನೆಲೆ ಇಂಜೆಕ್ಷನ್ ಪಡೆಯದೆ ಸುಮ್ಮನಾಗಿದ್ದಳು.

ಚೇತರಿಕೆ ಕಂಡ ಹುಮ್ಮಸ್ಸಿನಲ್ಲಿ ಮಹಿಳೆ ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ನಿರ್ಲಕ್ಷ ಮಾಡಿದ್ದಳು. ಈ ಹಿನ್ನಲೆಯಲ್ಲಿ ಮೊನ್ನೆಯಿಂದ ಬೆಕ್ಕು ಕಚ್ಚಿದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು. ದೇಹದಲ್ಲಿ ನಂಜು ಏರುತ್ತಲೇ ಹೋಗಿತ್ತು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ಇಂದು ಮೃತಪಟ್ಟಿದ್ದಾಳೆ.

ಇನ್ನು ಇದೇ ಬೆಕ್ಕು ಯಜಮಾನಿನನ್ನ ಕಚ್ಚುವ ಮುನ್ನ ಬೆಕ್ಕು ನಾಯಿಯ ಮರಿಯನ್ನ ಕಚ್ಚಿತ್ತು. ಅಲ್ಲದೇ ಈ ಬೆಕ್ಕು ತರಲಘಟ್ಟದ ಕ್ಯಾಂಪ್ ನಲ್ಲಿ ಯುವನೋರ್ವನ ಮೇಲೆ ದಾಳಿ ನಡೆಸಿ ಕಾಲಿಗೆ ಕಚ್ಚಿತ್ತು. ಯುವಕನ ಕಾಲಿಗೆ ಆಯರ್ವೇದ ಔಷಧ ಮಾಡಿ ಪರಿಣಾಮ ನಂಜು ತೆಗೆಸಲಾಗಿತ್ತು. ಪರಿಣಾಮ ಯುವಕ ಪ್ರಾಣಾಪಾಯದಿಂದ ಪಾರು ಆಗಿದ್ದಾನೆ.

ಯಾವುದೇ ಪ್ರಾಣಿಗಳು ಕಚ್ಚಿದ್ರೆ ಕನಿಷ್ಠ ನಂಜು ಆಗದಂತೆ ಐದು ಇಂಜೇಕ್ಷನ್ ಪಡೆದುಕೊಳ್ಳಬೇಕು. ಆದ್ರೆ ಇಲ್ಲಿ ಮಹಿಳೆಯು ಒಂದೇ ಇಂಜೆಕ್ಷನ್ ಪಡೆದು ಬಳಿಕ ನಿರ್ಲಕ್ಷ್ಯ ಮಾಡಿದ್ದಾಳೆ. ಗುಣಮುಖ ಆಗಿದೆ ಎಂದು ಭಾವಿಸಿ ಮಹಿಳೆಯು ನಾಟಿ ಮಾಡಲು ಹೋಗಿದ್ದಾಳೆ. ನೀರಿಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಳೆ. ಆದರೆ ರೇಬಿಸ್ನಿಂದಾಗಿ ಅನಾರೋಗ್ಯ ಕಾಡಿದ ಪರಿಣಾಮ ಮತ್ತೆ ಗಂಗೀಬಾಯಿ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ಇಲ್ಲಿ ಸಾವಿನ ಮನೆ ಸೇರಿದ್ದಾಳೆ.

ಯಜಮಾನಿನನ್ನ ಕಚ್ಚುವ ಮುನ್ನ ಬೆಕ್ಕು ನಾಯಿಯ ಮರಿಯನ್ನ ಕಚ್ಚಿತ್ತು. ಈ ನಾಯಿ ಮರಿ ಕೂಡಾ ಮೃತಪಟ್ಟಿತ್ತಂತೆ. ಮಹಿಳೆ ಮೇಲೆ ದಾಳಿ ಮಾಡಿದ ಬಳಿಕ ಬೆಕ್ಕು ಮನೆಯಿಂದ ಎಸ್ಕೇಪ್ ಆಗಿದೆಯಂತೆ.

ಇನ್ನು ಈ ಬಗ್ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಟಿ.ಡಿ ತಿಮ್ಮಪ್ಪ ಪ್ರತಿಕ್ರಿಯಿಸಿದ್ದು, ನಾಯಿಯು ಬೆಕ್ಕಿಗೆ ಕಚ್ಚಿರಬೇಕು. ನಾಯಿಯ ರೇಬಿಸ್ ಮಹಿಳೆಗೆ ಕಚ್ಚಿದ ಬೆಕ್ಕಿಗೆ ಬಂದಿದೆ. ಅದೇ ಬೆಕ್ಕು ಮಹಿಳೆಗೆ ಕಚ್ಚಿದೆ. ಇದರಿಂದ ಮಹಿಳೆಯು ಮೃತಪಟ್ಟಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾಯಿ ಕಚ್ಚಿದರೆ ರೇಬಿಸ್ ಬರುತ್ತೆ. ಅದರಂತೆ ನಾಯಿಯು ಈ ಬೆಕ್ಕಿಗೆ ಕಚ್ಚಿದ್ದರಿಂದ ರೇಬಿಸ್ ಹರಡಿದ್ದು, ಬಳಿಕ ಬೆಕ್ಕು ಮನೆ ಒಡತಿಗೆ ಕಚ್ಚಿದೆ. ಹೀಗಾಗಿ ಮಹಿಳೆ ರೇಬಿಸ್ನಿಂದ ಮೃತಪಟ್ಟಿದ್ದಾಳೆಂದು ಶಂಕಿಸಲಾಗಿದೆ.

ಬೆಕ್ಕು ಅಂದ್ರೆ ಎಲ್ಲರಿಗೂ ತುಂಬಾ ಇಷ್ಟು. ವಿವಿಧ ಜಾತಿಯ ದೇಶ ವಿದೇಶದ ಬೆಕ್ಕುಗಳನ್ನು ಜನರು ಮನೆಯಲ್ಲಿ ಸಾಕುತ್ತಾರೆ. ಆದ್ರೆ ಸಾಕು ಪ್ರಾಣಿಗಳ ಕುರಿತು ಸಾಕಷ್ಟು ಮುಂಜಾಗೃತೆ ವಹಿಸಬೇಕಿದೆ. ಇಲ್ಲದಿದ್ದರೇ ಅಪ್ಪಿ ತಪ್ಪಿ ಇಂತಹ ಪೆಟ್ ಕ್ಯಾಟ್ ಅಟ್ಯಾಕ್ ಮಾಡಿದ್ರೆ ಜೀವ ಕೂಡಾ ಹೋಗುತ್ತದೆ ಎನ್ನುವುದಕ್ಕೆ ಶಿವಮೊಗ್ಗ ಮಹಿಳೆ ಸಾವು ಉತ್ತಮ ಉದಾಹರಣೆಯಾಗಿದೆ.



















