ಚಿನ್ನದ ಬೆಲೆ 18,000 ರೂ ಏರುವ ಸಾಧ್ಯತೆ; ಖರೀದಿಸಲು ಇದು ಸಕಾಲ ಎನ್ನುತ್ತಾರೆ ತಜ್ಞರು

|

Updated on: Jul 26, 2024 | 8:32 PM

Time to invest in Gold: ಚಿನ್ನದ ಬೆಲೆ ಝರ್ ಎಂದು ಇಳಿಯುತ್ತಿದೆ. ಎಷ್ಟು ಇಳಿಯಬಹುದು, ಎಷ್ಟು ದಿನದವರೆಗೂ ಇಳಿಯಬಹುದು? ಏರಿಕೆಯಾದರೆ ಎಷ್ಟು ಹೆಚ್ಚಬಹುದು? ಇವೆಲ್ಲಾ ಪ್ರಶ್ನೆಗಳು ಚಿನ್ನ ಪ್ರಿಯರು ಮತ್ತು ಹೂಡಿಕೆದಾರರನ್ನು ಕಾಡುತ್ತಿರಬಹುದು. ತಜ್ಞರೊಬ್ಬರ ಪ್ರಕಾರ ಚಿನ್ನದ ಬೆಲೆ 10 ಗ್ರಾಮ್​ಗೆ ಬರೋಬ್ಬರಿ 18,000 ರೂನಷ್ಟು ಏರಬಹುದು. ಈ ಬಗ್ಗೆ ಒಂದು ಸ್ಟೋರಿ...

1 / 6
ಕೆಲ ತಿಂಗಳ ಹಿಂದಿನವರೆಗೂ ಸಿಕ್ಕಾಪಟ್ಟೆ ಉಬ್ಬಿನಿಂತಿದ್ದ ಚಿನ್ನದ ಬೆಲೆ ಈಗ ಕುಸಿಯತೊಡಗಿದೆ. ಭಾರತದಲ್ಲಿ ಬಜೆಟ್ ಬಳಿಕ ಆಮದು ಸುಂಕ ಇಳಿಸಿದ ಬಳಿಕ ಚಿನ್ನದ ಕುಸಿತದ ವೇಗ ಹೆಚ್ಚಿದೆ. ಆಭರಣ ಚಿನ್ನ 63,000 ರೂ ಮಟ್ಟಕ್ಕೆ ಇಳಿದಿದೆ. ಅಪರಂಜಿ ಚಿನ್ನ 69,000 ರೂ ಗಡಿಗೊಳಗೆ ಕುಸಿದಿದೆ.

2 / 6
ಚಿನ್ನದ ಬೆಲೆ ಎಲ್ಲಿಯವರೆಗೆ ಕುಸಿಯುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಜುಲೈ ಕೊನೆಯಲ್ಲಿ ಯುಎಸ್ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಪರಿಷ್ಕರಿಸಲಿದ್ದು, ದರ ಇಳಿಕೆಯಾದರೆ ಚಿನ್ನದ ಬೆಲೆಯೂ ಕಡಿಮೆ ಆಗಬಹುದು. ಅಂದರೆ, ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 61,000 ರೂ ಆಸುಪಾಸಿಗೆ ಹೋದರೂ ಅಚ್ಚರಿ ಇಲ್ಲ.

3 / 6
ಜಾಗತಿಕ ಮಾರುಕಟ್ಟೆ ಸಂಶೋಧಕ ಸರ್ವೇಂದ್ರ ಶ್ರೀವಾಸ್ತವ ಪ್ರಕಾರ, ಚಿನ್ನದ ಬೆಲೆ ಬಹಳ ಬೇಗ ಮತ್ತೆ ಏರುಗತಿಗೆ ಬರಲಿದೆಯಂತೆ. 18,000 ರೂನಷ್ಟು ಏರಿಕೆ ಆಗಬಹುದು ಎನ್ನುತ್ತಾರೆ ಅವರು. ಲಂಡನ್ ಬುಲಿಯನ್ ಎಕ್ಸ್​ಚೇಂಜ್​ನಲ್ಲಿನ ದರದ ಏರಿಳಿತ ವಿಶ್ಲೇಷಿಸಿ ಅವರು ಈ ಅಂದಾಜು ಮಾಡಿದ್ದಾರೆ.

4 / 6
ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸಕಾಲ. ಜುಲೈ 31ರವರೆಗೂ ಕಾದು ಬಳಿಕವೂ ಹೂಡಿಕೆ ಮಾಡಬಹುದು. ಈಗಿನ ದರದಲ್ಲೇ ಚಿನ್ನದ ಮೇಲೆ ಹೂಡಿಕೆ ಮಾಡಬಹುದು ಎಂದು ಸಲಹೆ ನೀಡುತ್ತಾರೆ ಜತೀನ್ ತ್ರಿವೇದಿ ಎಂಬ ಇನ್ನೊಬ್ಬ ಮಾರುಕಟ್ಟೆ ತಜ್ಞರು.

5 / 6
ಚಿನ್ನದ ಬೆಲೆ 72,000 ರೂ ಮುಟ್ಟಿದಾಗ ಬೆಲೆ ಏರಿಕೆ ಮತ್ತು ಇಳಿಕೆ ಮಧ್ಯೆ ಘರ್ಷಣೆ ಆಗಬಹುದು. ಬೆಲೆ ಇಳಿಕೆ ಆಗಲು ಶುರುವಾಗಬಹುದು. ಆ ಹಂತಕ್ಕೇರುತ್ತಿರುವಂತೆಯೇ ಚಿನ್ನವನ್ನು ಮಾರುವುದೂ ಕೆಟ್ಟ ನಿರ್ಧಾರವಾಗುವುದಿಲ್ಲ ಎನ್ನುವ ಅಭಿಪ್ರಾಯ ಇದೆ.

6 / 6
ಬಜೆಟ್​ನಲ್ಲಿ ಚಿನ್ನ, ಬೆಳ್ಳಿ ಇತ್ಯಾದಿ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ. ಹಾಗೆಯೇ, ಚಿನ್ನದ ಮೇಲೆ ಕ್ಯಾಪಿಟಲ್ ಗೇನ್ ತೆರಿಗೆಯನ್ನೂ ಕಡಿಮೆ ಮಾಡಲಾಗಿದೆ. ಇದು ಚಿನ್ನದ ಮೇಲೆ ಹೂಡಿಕೆ ಮಾಡುವವರ ಉತ್ಸಾಹ ಹೆಚ್ಚಿಸಿದಂತೆಯೇ. ಬೆಲೆ ಕಡಿಮೆ ಇರುವಾಗಲೇ ಚಿನ್ನ ತೆಗೆದುಹಿಡಿದುವುದು ಜಾಣತನ.