- Kannada News Photo gallery Cricket photos Women’s Asia Cup 2024 smriti mandhana becomes India's highest run scorer in Women's t20i
Women’s Asia Cup 2024: ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ
Women’s Asia Cup 2024: ಈ ಪಂದ್ಯದಲ್ಲಿ ಅಜೇಯ 55 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಸ್ಮೃತಿ ಮಂಧಾನ, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಹರ್ಮನ್‌ಪ್ರೀತ್ ಕೌರ್ ಹೆಸರಿನಲ್ಲಿ ಈ ದಾಖಲೆ ಇತ್ತು.
Updated on: Jul 26, 2024 | 8:38 PM

2024ರ ಏಷ್ಯಾಕಪ್‌ನಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ, ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ. ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಏಕಪಕ್ಷೀಯವಾಗಿ ಸೋಲಿಸಿ ದಾಖಲೆಯ 9ನೇ ಬಾರಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 80 ರನ್ಗಳನಷ್ಟೇ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಶೆಫಾಲಿ (ಔಟಾಗದೆ 26, 28 ಎಸೆತ, 2 ಬೌಂಡರಿ) ಮತ್ತು ಮಂಧಾನ (ಔಟಾಗದೆ 55, 39 ಎಸೆತ, 9 ಬೌಂಡರಿ, 1 ಸಿಕ್ಸರ್) ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿ 11 ಓವರ್‌ಗಳಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೆ 83 ರನ್ ಕಲೆಹಾಕಿದರು.

ಇನ್ನು ಈ ಪಂದ್ಯದಲ್ಲಿ ಅಜೇಯ 55 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಸ್ಮೃತಿ ಮಂಧಾನ, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಹರ್ಮನ್‌ಪ್ರೀತ್ ಕೌರ್ ಹೆಸರಿನಲ್ಲಿ ಈ ದಾಖಲೆ ಇತ್ತು.

ಈ ಪಂದ್ಯಕ್ಕೂ ಮುನ್ನ ಹರ್ಮನ್‌ಪ್ರೀತ್ ಕೌರ್ ಭಾರತ ಪರ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದರು. ಈಗ ಸ್ಮೃತಿ ಮಂಧಾನ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಂದಿದ್ದಾರೆ. ಸ್ಮೃತಿ ಮಂಧಾನ 140 ಪಂದ್ಯಗಳಲ್ಲಿ 3433 ರನ್ ಕಲೆಹಾಕಿದ್ದರೆ, ಹರ್ಮನ್‌ಪ್ರೀತ್ ಕೌರ್ 172 ಪಂದ್ಯಗಳಲ್ಲಿ 3415 ರನ್ ಸಿಡಿಸಿದ್ದಾರೆ.

ಇದಲ್ಲದೆ ಸ್ಮೃತಿ, ಮಹಿಳಾ ಏಷ್ಯಾಕಪ್ ಟಿ20ಯಲ್ಲಿ 400 ರನ್ ಪೂರೈಸಿದ ಮೂರನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಅವರು, ಹರ್ಮನ್‌ಪ್ರೀತ್ ಕೌರ್ (560) ಮತ್ತು ಮಿಥಾಲಿ ರಾಜ್ (430) ಅವರ ಕ್ಲಬ್ ಸೇರಿಕೊಂಡಿದ್ದಾರೆ.

ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಛೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್ ಮತ್ತು ರೇಣುಕಾ ಠಾಕೂರ್ ಸಿಂಗ್.

ಬಾಂಗ್ಲಾದೇಶದ ತಂಡ: ದಿಲಾರಾ ಅಖ್ತರ್, ಮುರ್ಷಿದಾ ಖಾತೂನ್, ನಿಗರ್ ಸುಲ್ತಾನಾ (ಕ್ಯಾಪ್ಟನ್), ರುಮಾನಾ ಅಹ್ಮದ್, ಇಷ್ಮಾ ತಂಜಿಮ್, ರಿತು ಮೋನಿ, ರಬೇಯಾ ಖಾನ್, ಶೋರ್ನಾ ಅಖ್ತರ್, ನಹಿದಾ ಅಖ್ತರ್, ಜಹಾನಾರಾ ಆಲಂ ಮತ್ತು ಮಾರುಫಾ ಅಖ್ತರ್.



















