ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ನಾಯಕ ಸಮರ್ಜಿತ್ ಲಂಕೇಶ್ ಹುಟ್ಟುಹಬ್ಬವನ್ನು ಚಿತ್ರತಂಡದ ಸದಸ್ಯರು ಆಚರಿಸಿದ್ದಾರೆ.
ಸಮರ್ಜಿತ್ ಅವರ ಅಜ್ಜಿ, ಪಿ.ಲಂಕೇಶ್ ಪತ್ನಿ ಇಂದಿರಾ ಲಂಕೇಶ್, ತಾಯಿ ಅರ್ಪಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ನಾಯಕಿ ಸಾನ್ಯ ಅಯ್ಯರ್, ನಟಿಯರಾದ ಮಾನಸಿ ಸುಧೀರ್, ಎಸ್ತರ ನರೋನ, ಹಿರಿಯ ಛಾಯಾಗ್ರಾಹಕ ಕೆ.ಕೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
"ಗೌರಿ" ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈಗಾಗಲೇ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಸಾನ್ಯ ಐಯ್ಯರ್ ಅವರು ಸಮರ್ಜಿತ್ ಎದುರು ನಾಯಕಿಯಾಗಿ ನಟಿಸುತ್ತಿದ್ದು, ಸಿನಿಮಾದಲ್ಲಿ ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ಇದ್ದಾರೆ.
ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದ ಸಮರ್ಜಿತ್, ಚಿತ್ರ ಚೆನ್ನಾಗಿ ಮೂಡಿಬರುವ ಭರವಸೆ ಇದೆ ಎಂದರು.
ನಾಯಕಿ ಸಾನ್ಯ ಅಯ್ಯರ್ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಮಾನಸಿ ಸುಧೀರ್ ಹಾಗೂ ಎಸ್ತರ್ ನರೋನ ಸಹ ಚಿತ್ರದ ಕುರಿತು ಮಾತನಾಡಿದರು.