Updated on: Jan 27, 2023 | 5:24 PM
ಹಂಪಿ ಉತ್ಸವದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಫಲ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ವೆರೈಟಿ ವೆರೈಟಿ ಹೂಗಳಲ್ಲಿ ಹಂಪಿಯ ಐತಿಹಾಸಿಕ ಸ್ಮಾರಕಗಳು ಅರಳಿ ನಿಂತಿದ್ದು, ನೋಡುಗರಿಗೆ ಮುದ ನೀಡುತ್ತಿವೆ.
ವಿಶೇಷವಾಗಿ ಪುನೀತ್ ರಾಜ್ ಕುಮಾರ್ ಪುತ್ಥಳಿ, ಕಾಂತಾರ ಸಿನಿಮಾದ ಪಂಜುರ್ಲಿ ದೈವ ಎಲ್ಲರ ಗಮನ ಸೆಳೆಯುತ್ತಿವೆ.
ಹಂಪಿ ವಿರುಪಾಕ್ಷ ದೇವಾಲಯ, ಉಗ್ರ ನರಸಿಂಹ, ಸಾಸಿವೆ ಕಾಳು ಗಣಪ, ಸಾಲು ಮಂಟಪ ಸೇರಿ ಹತ್ತು ಹಲವು ಸ್ಮಾರಕಗಳು ಹೂವಿನಲ್ಲಿ ಅರಳಿವೆ.
ಫಲ ಪುಷ್ಪ ಪ್ರದರ್ಶನ ನೋಡಲು ಹರಿದು ಬರುತ್ತಿರುವ ಜನ ಸಾಗರ.