Hansika Motwani: ಸ್ವಿಮ್ ಸ್ಯೂಟ್ನಲ್ಲಿ ಮಿಂಚಿದ ‘ಬಿಂದಾಸ್’ ಬೆಡಗಿ ಹನ್ಸಿಕಾ ಮೋಟ್ವಾನಿ
TV9 Web | Updated By: ರಾಜೇಶ್ ದುಗ್ಗುಮನೆ
Updated on:
May 11, 2022 | 3:56 PM
ಹನ್ಸಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಂಡು ಅವರು ಗಮನ ಸೆಳೆಯುತ್ತಾರೆ. ಈ ಬಾರಿ ಅವರು ಮಾಲ್ಡೀವ್ಸ್ ಟ್ರಿಪ್ಗೆ ತೆರಳಿದ್ದಾರೆ.
1 / 5
ಪುನೀತ್ ರಾಜ್ಕುಮಾರ್ ನಟನೆಯ ‘ಬಿಂದಾಸ್’ ಸಿನಿಮಾ 2008ರಲ್ಲಿ ತೆರೆಗೆ ಬಂತು. ಈ ಸಿನಿಮಾ ಮೂಲಕ ನಟಿ ಹನ್ಸಿಕಾ ಮೋಟ್ವಾನಿ ಅವರು ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಈ ಸಿನಿಮಾದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು.
2 / 5
ಅವರು ನಟಿಸಿದ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ ‘ಬಿಂದಾಸ್’. ಈ ಚಿತ್ರದ ಬಳಿಕ ಅವರು ಪರಭಾಷೆಯಲ್ಲಿ ಬ್ಯುಸಿ ಆದರು.
3 / 5
ಹನ್ಸಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಂಡು ಅವರು ಗಮನ ಸೆಳೆಯುತ್ತಾರೆ. ಈ ಬಾರಿ ಅವರು ಮಾಲ್ಡೀವ್ಸ್ ಟ್ರಿಪ್ಗೆ ತೆರಳಿದ್ದಾರೆ.
4 / 5
ಮಾಲ್ಡೀವ್ಸ್ ಟ್ರಿಪ್ನ ಫೋಟೋವನ್ನು ಹನ್ಸಿಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಸ್ವಿಮ್ ಸ್ಯೂಟ್ನಲ್ಲಿ ಮಿಂಚಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ.
5 / 5
ಹನ್ಸಿಕಾ ಸದ್ಯ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 2019 ಬಳಿಕ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬವಾಗುತ್ತಿವೆ.