ವ್ಯಾಲೆಂಟೈನ್ಸ್ ಡೇ ದಿನ ಹಾರ್ದಿಕ್ ಪಾಂಡ್ಯ-ನತಾಶಾ ಮದುವೆ; ಇಲ್ಲಿವೆ ಫೋಟೋಸ್
Hardik Pandya and Natasa Stankovic Wedding: ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡರು. ಆದರೆ, ಮದುವೆ ಆಗಿರಲಿಲ್ಲ.
1 / 6
ಭಾರತದ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಚ್ ಅವರ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ.
2 / 6
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡರು. ಆದರೆ, ಮದುವೆ ಆಗಿರಲಿಲ್ಲ. ನಂತರ ನತಾಶಾ ಗಂಡುಮಗುವಿಗೆ ಜನ್ಮನೀಡಿದರು. ಈಗ ಇವರು ರಾಜಸ್ಥಾನದ ಜೈಪುರದಲ್ಲಿ ಮದುವೆ ಆಗಿದ್ದಾರೆ.
3 / 6
ಹಾರ್ದಿಕ್ ಹಾಗೂ ನತಾಶಾ ಫೆಬ್ರವರಿ 14ರಂದು ಮದುವೆ ಆಗಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
4 / 6
ಮದುವೆ ಆದ ಬಳಿಕ ಮಗು ಮಾಡಿಕೊಳ್ಳೋದು ಕಾಮನ್. ಆದರೆ, ಹಾರ್ದಿಕ್ ಪಾಂಡ್ಯ ಮಗು ಪಡೆದ ನಂತರ ಮದುವೆ ಆಗಿದ್ದಾರೆ. ಈ ವಿಚಾರದಲ್ಲಿ ಅನೇಕರನ್ನು ಅವರನ್ನು ಟ್ರೋಲ್ ಕೂಡ ಮಾಡಿದ್ದಾರೆ.
5 / 6
ನತಾಶಾ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ‘ಬಿಗ್ ಬಾಸ್ 8’ರ ಸ್ಪರ್ಧಿ ಆಗಿದ್ದರು. ಕೆಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
6 / 6
ಈ ಮದುವೆ ಎರಡು ರೀತಿಯಲ್ಲಿ ನಡೆದಿದೆ ಎನ್ನಲಾಗಿದೆ. ಮೊದಲು ಈ ಇಬ್ಬರು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಬಳಿಕ, ಪಾಶ್ಚಿಮಾತ್ಯ ಸಂಸ್ಕೃತಿ ಪ್ರಕಾರ ಮದುವೆ ಆಗಿದ್ದಾರೆ.
Published On - 7:51 am, Wed, 15 February 23