ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದು, ಮದುವೆ ಕಾರ್ಯ ಶುರುವಾಗಿವೆ.
ವಿರಾಜಪೇಟೆಯಲ್ಲಿ ಈ ಜೋಡಿ ಮದುವೆ ಆಗಲಿದ್ದು, ಇಂದು ಮದುವೆ ಶಾಸ್ತ್ರಗಳು ಶುರುವಾಗಿವೆ.
ಕೊಡಗಿನ ವಿರಾಜಪೇಟೆಯ "ಅಮ್ಮತಿ ಕೊಡವ ಸಮಾಜ"ದಲ್ಲಿ ಕೊಡವ ಸಂಪ್ರದಾಯದಂತೆ ಇವರು ಮದುವೆ ನಡೆಯಲಿದೆ.
ಮದುವೆಗೂ ಮುನ್ನವೇ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ ಹರ್ಷಿಕಾ ಪೂಣಚ್ಚ.
ಹರ್ಷಿಕಾಗಾಗಿಯೇ ತೋಟದ ಮನೆಯಲ್ಲಿ ಮನೆ ಕಟ್ಟಿಸಿದ್ದಾರೆ ಭುವನ್ ಪೊನ್ನಣ್ಣ
ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಎಂಟ್ರಿಕೊಟ್ಟಿದ್ದಾರೆ ಭುವನ್ ಬಾವಿ ಪತ್ನಿ ಹರ್ಷಿಕಾ
ಭುವನ್ ಸಹ ಕೊಡವ ಸಂಪ್ರದಾಯದಂತೆ ಬಂದೂಕು ಹಿಡಿದುಕೊಂಡು ಶುಭ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಹರ್ಷಿಕಾ ಹಾಗೂ ಭುವನ್ ವಿವಾಹ ಆಗಸ್ಟ್ 24 ರಂದು ನೆರವೇರಲಿದೆ.