‘ಗಂಡರಬಾಯ್..’ ಹಾಡಿನಲ್ಲಿ ಹೇಗಿದೆ ನೋಡಿ ಶ್ರೀಲೀಲಾ ಅವತಾರ; ಫೋಟೋ ಮೂಲಕ ವಿವರಿಸಿದ ನಟಿ
ಶ್ರೀಲೀಲಾ ಅವರು ಡ್ಯಾನ್ಸ್ ಕೂಡ ಸೂಪರ್ ಆಗಿ ಮಾಡುತ್ತಾರೆ. ಅವರು ‘ಸ್ಕಂದ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಗಂಡರಬಾಯ್..’ ಹಾಡಿನ ಲಿರಿಕಲ್ ಹಾಡಿನ ಪ್ರೋಮೋ ಇತ್ತೀಚೆಗೆ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ.
Updated on: Aug 23, 2023 | 9:30 AM

2022ರಲ್ಲಿ ರಿಲೀಸ್ ಆದ ರವಿತೇಜ-ಶ್ರೀಲೀಲಾ ಅಭಿನಯದ ‘ಧಮಾಕ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಶ್ರೀಲೀಲಾಗೆ ಇರುವ ಬೇಡಿಕೆ ಹೆಚ್ಚಿದೆ. ಅವರ ಬಳಿ ಹಲವು ಸಿನಿಮಾಗಳು ಇವೆ. ಇವುಗಳಲ್ಲಿ ಬಹುತೇಕ ಎಲ್ಲವೂ ತೆಲುಗು ಸಿನಿಮಾಗಳು.

ಶ್ರೀಲೀಲಾ ಅವರು ಡ್ಯಾನ್ಸ್ ಕೂಡ ಸೂಪರ್ ಆಗಿ ಮಾಡುತ್ತಾರೆ. ಅವರು ‘ಸ್ಕಂದ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಗಂಡರಬಾಯ್..’ ಹಾಡಿನ ಲಿರಿಕಲ್ ಹಾಡಿನ ಪ್ರೋಮೋ ಇತ್ತೀಚೆಗೆ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ.

ಈ ಹಾಡಿನಲ್ಲಿ ರಾಮ್ ಪೋತಿನೇನಿ- ಶ್ರೀಲೀಲಾ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಹಾಡಿನ ಕೆಲ ಸ್ಟಿಲ್ಸ್ಗಳನ್ನು ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಟಿ ಶ್ರೀಲೀಲಾ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗು ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರ ಕೈಯಲ್ಲಿ ಈಗ 8 ಚಿತ್ರಗಳಿವೆ ಅನ್ನೋದು ವಿಶೇಷ. ರಶ್ಮಿಕಾ ಮಂದಣ್ಣ ರೀತಿ ಅವರು ತೆಲುಗಿನಲ್ಲಿ ಹೆಸರು ಮಾಡುತ್ತಿದ್ದಾರೆ.

ಕನ್ನಡ ಬಿಟ್ಟು ತೆಲುಗು ಸಿನಿಮಾಗಳನ್ನು ಮಾಡುತ್ತಿರುವುದಕ್ಕೆ ಅನೇಕರು ಅಪಸ್ವರ ತೆಗೆದಿದ್ದಾರೆ. ಕಮೆಂಟ್ ಬಾಕ್ಸ್ನಲ್ಲಿ ಶ್ರೀಲೀಲಾಗೆ ಬಯ್ಯುವ ಕೆಲಸ ಆಗುತ್ತಿದೆ. ಆದರೆ, ಶ್ರೀಲೀಲಾ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಾರೆ.

8 ಸಿನಿಮಾಗಳ ಪೈಕಿ ಅವರ ನಟನೆಯ ‘ಸ್ಕಂದ’ ಚಿತ್ರ ಭರ್ಜರಿ ನಿರೀಕ್ಷೆ ಹುಟ್ಟುಹಾಕಿದೆ. ಬೋಯಪತಿ ಶ್ರೀನು ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಅಖಂಡ’ದಂಥ ಮಾಸ್ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.

‘ಸ್ಕಂದ’ ಚಿತ್ರ ಸೆಪ್ಟೆಂಬರ್ 15ರಂದು ಎಲ್ಲಾ ಕಡೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಪ್ರಚಾರ ಮಾಡುವ ಕೆಲಸವನ್ನು ತಂಡ ಆರಂಭಿಸಿದೆ. ಈ ಚಿತ್ರವನ್ನು ಶ್ರೀನಿವಾಸ ಚಿತ್ತುರಿ ನಿರ್ಮಾಣ ಮಾಡಿದ್ದಾರೆ. ಎಸ್. ಥಮನ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



