ವರ್ಷ ಕಳೆದರೂ ಇಲ್ಲಿ ದೀಪ ಆರಲ್ಲ, ಹೂ ಬಾಡಲ್ಲ; ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

Edited By: ಆಯೇಷಾ ಬಾನು

Updated on: Nov 02, 2023 | 12:51 PM

Hasanamba Temple: ವರ್ಷದ ಬಳಿಕ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್ ಮಾಡಲಾಗಿದೆ. ನಾಳೆಯಿಂದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ 12 ದಿನ ಬೆಳಗ್ಗೆ 6ರಿಂದ ಹಾಸನಾಂಬೆ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಬರುವ ಭಕ್ತರಿಗೆ ಹಾಸನ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

1 / 7
ಹಾಸನದ ಅಧಿದೇವತೆ, ನಾಡಿನ ಶಕ್ತಿ ದೇವತೆ, ವರ್ಷಕ್ಕೊಮ್ಮೆ ದರ್ಶನ ಕರುಣಿಸೋ ಹಾಸನಾಂಬೆ ನೋಡುವ ಭಾಗ್ಯ ಮತ್ತೆ ಕೂಡಿ ಬಂದಿದೆ. ಹಾಸನ ಜಿಲ್ಲಾ ಉಸ್ತುವಾರಿ ಕೆ.ಎನ್​.ರಾಜಣ್ಣ ಉಪಸ್ಥಿತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ  ಅಪರಾಹ್ನ 12 ಗಂಟೆ 23  ನಿಮಿಷ ಕ್ಕೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಮಾಡಲಾಗಿದೆ.​​​

ಹಾಸನದ ಅಧಿದೇವತೆ, ನಾಡಿನ ಶಕ್ತಿ ದೇವತೆ, ವರ್ಷಕ್ಕೊಮ್ಮೆ ದರ್ಶನ ಕರುಣಿಸೋ ಹಾಸನಾಂಬೆ ನೋಡುವ ಭಾಗ್ಯ ಮತ್ತೆ ಕೂಡಿ ಬಂದಿದೆ. ಹಾಸನ ಜಿಲ್ಲಾ ಉಸ್ತುವಾರಿ ಕೆ.ಎನ್​.ರಾಜಣ್ಣ ಉಪಸ್ಥಿತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಅಪರಾಹ್ನ 12 ಗಂಟೆ 23 ನಿಮಿಷ ಕ್ಕೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಮಾಡಲಾಗಿದೆ.​​​

2 / 7

ಹೊರಗೆ ಕದಳಿ ಕಡಿಯುತ್ತಲೆ ಒಳಗೆ ಅರ್ಚಕರು ಬಾಗಿಲು ತೆರೆದರು. ಗಣ್ಯರು ಗರ್ಭಗುಡಿಯ ಒಳಗೆ ಆರದ ಜ್ಯೋತಿ ಕಣ್ತುಂಬಿಕೊಂಡ‌ರು. ವರ್ಷದ ಹಿಂದೆ ಹಚ್ಚಿಟ್ಟ ದೀಪ ಆರೋದಿಲ್ಲ, ಹೂ ಬಾಡಲ್ಲವೆಂಬ ನಂಬಿಕೆಯಂತೆ ದೀಪ ಉರಿಯುತ್ತಿತ್ತು, ಹೂ ಘಮಿಸುತ್ತಿತ್ತು.

3 / 7

ನಾಳೆಯಿಂದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ 12 ದಿನ ಬೆಳಗ್ಗೆ 6ರಿಂದ ಹಾಸನಾಂಬೆ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಬರುವ ಭಕ್ತರಿಗೆ ಹಾಸನ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

4 / 7

14 ದಿನ ದೇವಿ ದರ್ಶನ ನೀಡಲಿದ್ದು, ಹಾಸನಾಂಬೆ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ವಿವಿಧ ಬಗೆಯ ಹೂಗಳು.. ಕಬ್ಬು, ಜೋಳ, ತೆಂಗಿನ ಕಾಯಿಗಳಿಂದ ದೇಗುಲ ಸಿಂಗಾರಗೊಂಡಿದೆ. ಭಕ್ತರು ಸಾಲಾಗಿ ಬರಲು ಸಕಲ ಸಿದ್ಧತೆ ಮಾಡಲಾಗಿದೆ. ನಾಳೆಯಿಂದ ತಾಯಿ ಹಾಸನಾಂಬೆ ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

5 / 7

ಹಾಸನಾಂಬೆ ಸನ್ನಿಧಿ ಬಗೆಬಗೆಯ ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದೆ. ವಿದ್ಯುತ್ ದೀಪಾಲಂಕಾರಗಳು ಮೆರುಗು ಹೆಚ್ಚಿಸಿವೆ. 1 ವರ್ಷದ ಬಳಿಕ ಹಾಸನಾಂಬೆಯ ದರ್ಶನ ಮಾಡ್ತೀವಿ ಅನ್ನೋ ಖುಷಿ ಮನೆ ಮಾಡಿದೆ. ಇಂದಿನಿಂದ 14 ದಿನ ಹಾಸನಾಂಬೆಯ ಉತ್ಸವ ನಡೆಯಲಿದೆ.

6 / 7

ಈ ಬಾರಿ ಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸೋ ನಿರೀಕ್ಷೆ ಇದೆ. ಸುಮಾರು 10 ಕಿಲೋ ಮೀಟರ್ ಉದ್ದದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ VIP, VVIP, ವಿಶೇಷ ನೇರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

7 / 7

ಭಕ್ತರ ಅನುಕೂಲಕ್ಕಾಗಿ ಕ್ಯೂ ಆರ್ ಕೋಡ್ ವ್ಯವಸ್ಥೆ, ಕಾಣಿಕೆ ಹಾಕಲು ಇ ಹುಂಡಿಯನ್ನ ಸಹಾ ವ್ಯವಸ್ಥೆ ಮಾಡಲಾಗಿದೆ. ಇನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ರಂಗೋಲಿ ಸ್ಪರ್ಧೆ, ಹೆಲಿ ಟೂರಿಸಂ ವ್ಯವಸ್ಥೆಯೂ ಇದೆ. ಇಂದು ಮೊದಲ ದಿನವಾಗಿದ್ದು, ಸಾರ್ವಜನಿಕರಿಗೆ ದೇವಿಯ ದರ್ಶನ ಇರಲ್ಲ.

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us